ಕರ್ನಾಟಕ

karnataka

By

Published : Mar 2, 2020, 4:31 PM IST

ETV Bharat / bharat

ದೆಹಲಿ ಹಿಂಸಾಚಾರ: ದ್ವೇಷ ಭಾಷಣಕಾರರ ವಿರುದ್ಧ ಎಫ್‌ಐಆರ್ ದಾಖಲಿಸಲು ಕೋರಿದ್ದ ಅರ್ಜಿ ಮಾ.4 ಕ್ಕೆ ವಿಚಾರಣೆ

ದೆಹಲಿಯಲ್ಲಿ ನಡೆದ ಹಿಂಸಾಚಾರಕ್ಕೆ ಕಾರಣವಾದ ದ್ವೇಷದ ಭಾಷಣ ಮಾಡಿದ ರಾಜಕಾರಣಿಗಳ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಕೋರಿ ಸಲ್ಲಿಸಿದ್ದ ಮನವಿಯನ್ನು ಮಾರ್ಚ್ 4 ರಂದು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ನಿರ್ಧರಿಸಿದೆ.

delhi-violence-sc-to-hear-plea-seeking-firs-over-hate-speeches
ಮಾ.4 ಕ್ಕೆ ವಿಚಾರಣೆ

ನವದೆಹಲಿ: ರಾಜಧಾನಿಯಲ್ಲಿ ನಡೆದ ಹಿಂಸಾಚಾರಕ್ಕೆ ಕಾರಣವಾದ ದ್ವೇಷ ಭಾಷಣ ಮಾಡಿದ ರಾಜಕಾರಣಿಗಳ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಕೋರಿ ಸಲ್ಲಿಸಿದ್ದ ಮನವಿಯನ್ನು ಮಾರ್ಚ್ 4 ರಂದು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ನಿರ್ಧರಿಸಿದೆ.

ಮಾ.4 ಕ್ಕೆ ವಿಚಾರಣೆ

ದ್ವೇಷ ಭಾಷಣ ಮಾಡಿದ ರಾಜಕಾರಣಿಗಳ ಆರೋಪ ಪಟ್ಟಿಯಲ್ಲಿ ಕೇಂದ್ರ ಸಚಿವ ಅನುರಾಗ್ ಠಾಕೂರ್, ಬಿಜೆಪಿ ಸಂಸದ ಪರ್ವೇಶ್ ವರ್ಮಾ, ಮತ್ತು ದೆಹಲಿ ಬಿಜೆಪಿ ಮುಖಂಡ ಕಪಿಲ್ ಮಿಶ್ರಾ ಸೇರಿದ್ದಾರೆ.

ಹಿಂಸಾಚಾರ ಸಂತ್ರಸ್ತರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಲು ಮುಖ್ಯ ನ್ಯಾಯಮೂರ್ತಿ ಎಸ್. ಎ. ಬೊಬ್ಡೆ ನೇತೃತ್ವದ ನ್ಯಾಯಪೀಠ ಒಪ್ಪಿಗೆ ನೀಡಿದೆ. ನಾವು ಶಾಂತಿಯನ್ನು ಬಯಸುತ್ತೇವೆ ಆದರೆ ಅದಕ್ಕೂ ಮಿತಿಗಳಿವೆ ಎಂದು ನಿಮಗೆ ತಿಳಿದಿದೆ" ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಈ ಸಂಬಂಧ ಇಂದು ಕೋರ್ಟ್​​ನಲ್ಲಿ ನಡೆದ ವಿಚಾರಣೆಗೆ ಹಿರಿಯ ವಕೀಲ ಕಾಲಿನ್ ಗೊನ್ಸಾಲ್ವೆಸ್ ಗಲಭೆ ಸಂತ್ರಸ್ತರ ಪರವಾಗಿ ಹಾಜರಾಗಿದ್ದು, ಅರ್ಜಿಯನ್ನು ತುರ್ತು ವಿಚಾರಣೆ ನಡೆಸಬೇಕೆಂದು ಕೋರಿದರು. ದೆಹಲಿ ಹೈ ಕೋರ್ಟ್​ ಈ ಅರ್ಜಿ ವಿಚಾರಣೆಯನ್ನು 4 ವಾರಗಳ ಕಾಲ ಮುಂದೂಡಿದೆ. ಹಿಂಸಾಚಾರದಲ್ಲಿ ಜನರು ಸಾಯುತ್ತಲೇ ಇದ್ದರೂ ಏಕೆ ತುರ್ತು ವಿಚಾರಣೆ ಸಾಧ್ಯವಾಗಿಲ್ಲ ಎಂದು ಪ್ರಶ್ನಿಸಿದ್ರು.

ಇದಕ್ಕೆ ಉತ್ತರಿಸಿದ ಕೋರ್ಟ್​​ ಗಲಭೆ ತಡೆಯುವುದು ಆಡಳಿತ ವರ್ಗದ ಕೆಲಸ ,ಇದಕ್ಕೆ ಹಿಂಸಾಚಾರ ಕುರಿತ ಅರ್ಜಿ ವಿಚಾರಣೆಗೆ ಕೋರ್ಟ್​​ ಸಿದ್ಧಗೊಂಡಿಲ್ಲ ಎಂದು ತಿಳಿಸಿತು.

ABOUT THE AUTHOR

...view details