ನವದೆಹಲಿ:ದೆಹಲಿ ಕ್ರೈಂ ಬ್ರ್ಯಾಂಚ್ನ ವಿಶೇಷ ತನಿಖಾ ದಳ ಹಿಂಸಾಚಾರಕ್ಕೆ ಸಂಬಂಧಪಟ್ಟಂತೆ ತನಿಖೆ ಚುರುಕುಗೊಳಿಸಿದೆ. ಈಗಾಗಲೇ ಪ್ರಕರಣದಲ್ಲಿ ಬಂಧಿತನಾಗಿರುವ ಶಾರೂಖ್ ನಿಂದ ಪಿಸ್ತೂಲ್ ವಶಕ್ಕೆ ಪಡೆದಿರುವ ವಿಶೇಷ ತನಿಖಾ ದಳ ತನಿಖೆ ಮುಂದುವರೆಸಿದೆ.
ದೆಹಲಿ ಹಿಂಸಾಚಾರ: ಎಸ್ಐಟಿ ತನಿಖೆ ಮತ್ತಷ್ಟು ಚುರುಕು - ಎಸ್ಐಟಿಯಿಂದ ತನಿಖೆ ಮತ್ತಷ್ಟು ಚುರುಕು
ದೆಹಲಿ ಕ್ರೈಂ ಬ್ರ್ಯಾಂಚ್ನ ವಿಶೇಷ ತನಿಖಾ ದಳ ಹಿಂಸಾಚಾರಕ್ಕೆ ಸಂಬಂಧಪಟ್ಟಂತೆ ತನಿಖೆ ಚುರುಕುಗೊಳಿಸಿದೆ. ಈಗಾಗಲೇ ಪ್ರಕರಣದಲ್ಲಿ ಬಂಧಿತನಾಗಿರುವ ಶಾರೂಖ್ ನಿಂದ ಪಿಸ್ತೂಲ್ ವಶಕ್ಕೆ ಪಡೆದಿರುವ ವಿಶೇಷ ತನಿಖಾ ದಳ ತನಿಖೆ ಮುಂದುವರೆಸಿದೆ.
ದೆಹಲಿ ಹಿಂಸಾಚಾರ: ಎಸ್ಐಟಿಯಿಂದ ತನಿಖೆ ಮತ್ತಷ್ಟು ಚುರುಕು
ಈ ಪಿಸ್ತೂಲ್ ಅನ್ನು ಶಾರೂಖ್ ಗಲಭೆ ವೇಳೆ ಬಳಕೆ ಮಾಡಿದ್ದ. ಶಾರೂಖ್ ಮನೆಯಲ್ಲಿ ಪಿಸ್ತೂಲ್ಗೆ ಬಳಸಲಾಗುತ್ತಿದ್ದ ಮೂರು ಸುತ್ತುಗಳ ಗುಂಡುಗಳನ್ನೂ ವಶಕ್ಕೆ ಪಡೆದಿದ್ದಾರೆ. ಇದೇ ವೇಳೆ, ಆತ ಬಳಕೆ ಮಾಡುತ್ತಿದ್ದ ಮೊಬೈಲ್ ಫೋನ್ಗಳನ್ನ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಅಂದ ಹಾಗೆ ಶಾರೂಖ್, ಗಲಭೆ ವೇಳೆ ಬಂದೂಕಿನಿಂದ ಫೈರಿಂಗ್ ಮಾಡುತ್ತಿದ್ದ ಫೋಟೋಗಳು ಫೆಬ್ರವರಿ 24 ರಂದು ವೈರಲ್ ಆಗಿದ್ದವು.
ಈ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯಲ್ಲಿ ಶಾರೂಖ್ನನ್ನು ದೆಹಲಿ ಪೊಲೀಸರು ಬಂಧಿಸಿದ್ದರು.