ನವದೆಹಲಿ: ಈಶಾನ್ಯ ದೆಹಲಿಯಲ್ಲಿ ನಡೆದ ಹಿಂಸಾಚಾರ 42 ಮಂದಿಯನ್ನು ಮಾತ್ರವೇ ಬಲಿ ಪಡೆದಿಲ್ಲ. ಬದಲಾಗಿ ಈ ಶಾಲೆಯ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯವನ್ನೂ ಕಿತ್ತುಕೊಂಡಿದೆ.
ದೆಹಲಿ ಹಿಂಸಾಚಾರಕ್ಕೆ ಸುಟ್ಟುಹೋದ ಶಾಲೆ: 1,222 ವಿದ್ಯಾರ್ಥಿಗಳ ಭವಿಷ್ಯಕ್ಕೆ ಯಾರು ಹೊಣೆ? - ದೆಹಲಿಯ ಜಫ್ರಾಬಾದ್ ಪ್ರದೇಶದಲ್ಲಿದ್ದ ಅರುಣ್ ಮಾಡರ್ನ್ ಪಬ್ಲಿಕ್ ಸ್ಕೂಲ್
ದೆಹಲಿ ಹಿಂಸಾಚಾರದ ವೇಳೆ 1,222 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದ ದೆಹಲಿಯ ಜಫ್ರಾಬಾದ್ ಪ್ರದೇಶದಲ್ಲಿದ್ದ ಅರುಣ್ ಮಾಡರ್ನ್ ಪಬ್ಲಿಕ್ ಸ್ಕೂಲ್ನಲ್ಲಿ ಈಗ ಉಳಿದಿರುವುದು ಮುರಿದ ಬೆಂಚ್ಗಳು ಹಾಗೂ ಸುಟ್ಟುಹೋದ ಪುಸ್ತಕಗಳು ಮಾತ್ರ.
ದೆಹಲಿಯ ಜಫ್ರಾಬಾದ್ ಪ್ರದೇಶದಲ್ಲಿದ್ದ ಅರುಣ್ ಮಾಡರ್ನ್ ಪಬ್ಲಿಕ್ ಸ್ಕೂಲ್ನಲ್ಲಿ ಈಗ ಉಳಿದಿರುವುದು ಮುರಿದ ಬೆಂಚ್ಗಳು ಹಾಗೂ ಸುಟ್ಟುಹೋದ ಪುಸ್ತಕಗಳು ಮಾತ್ರ. ಮೂರು ದಿನಗಳ ಕಾಲ ನಡೆದ ದೆಹಲಿ ಹಿಂಸಾಚಾರದ ವೇಳೆ 1,222 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದ ಈ ಶಾಲೆಗೆ ಬೆಂಕಿ ಹಚ್ಚಿ ಗಲಭೆಕೋರರು ಧ್ವಂಸ ಮಾಡಿದ್ದರು.
ಈ ಕುರಿತು ಈಟಿವಿ ಭಾರತ್ ಜೊತೆ ಮಾತನಾಡಿರುವ ಶಾಲೆಯ ಮಾಲೀಕ ಅಭಿಷೇಕ್ ಶರ್ಮಾ, ಫೆ.25 ರಂದು ಶಾಲಾಗೆ ನುಗ್ಗಿದ ಗಲಭೆಕೋರರು ಸತತ ಮೂರು ಗಂಟೆಗಳ ಕಾಲ ಹಿಂಸಾಚಾರ ಚಟುವಟಿಕೆಯನ್ನ ಮುಂದುವರೆಸಿದ್ದರು. ಶಾಲಾ ವಾಹನ, ಪ್ರಾಂಶುಪಾಲರ ಕೊಠಡಿ, ಗ್ರಂಥಾಲಯ, ತರಗತಿ ಕೊಠಡಿಗಳು ಸೇರಿ ಎಲ್ಲವನ್ನೂ ನಾಶಮಾಡಿದರು. ಇದೀಗ ನಮ್ಮ ಶಿಕ್ಷಣ ಸಂಸ್ಥೆ ಪ್ರಾರಂಭವಾದಾಗಿನಿಂದ ಸಂಗ್ರಹಿಸಿದ್ದ ಶಾಲೆಯ ಹಾಗೂ ವಿದ್ಯಾರ್ಥಿಗಳ ದಾಖಲೆಗಳು, ಪರೀಕ್ಷಾ ಪ್ರಶ್ನೆ ಪತ್ರಿಕೆ ಸುಟ್ಟು ಭಸ್ಮವಾಗಿದೆ ಎಂದು ಸಂಸ್ಥೆಯ ಆಡಳಿತ ಅಳಲು ತೋಡಿಕೊಂಡಿದೆ.