ನವದೆಹಲಿ:ಶಾಲಾ ಶಿಕ್ಷಕಿ ಮೇಲೆ ಅದೇ ಶಾಲೆಯ ಪ್ರಿನ್ಸಿಪಾಲ್ ಅತ್ಯಾಚಾರ ಮಾಡಿ ಅದರ ವಿಡಿಯೋ ಮಾಡಿರುವ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಲಾಗಿದೆ.
ಆಗ್ನೇಯ ದೆಹಲಿಯ ಜಸೋಲಾ ಪ್ರದೇಶದಲ್ಲಿನ ಶಾಲೆಯೊಂದರಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಶಿಕ್ಷಕಿ ದೂರಿನಲ್ಲಿ ತಿಳಿಸಿರುವ ಪ್ರಕಾರ, 2017ರಲ್ಲೇ ತನಗೆ ಪ್ರಿನ್ಸಿಪಾಲ್ ಲೈಂಗಿಕ ಕಿರುಕುಳ ನೀಡಿದ್ದ. ಇದೀಗ ಶಾಲೆ ಮುಕ್ತಾಯಗೊಂಡ ಬಳಿಕ ಹೆಚ್ಚುವರಿ ಕ್ಲಾಸ್ ತೆಗೆದುಕೊಳ್ಳುವಂತೆ ಅವರು ತಿಳಿಸಿದ್ದರು. ಅದರಂತೆ ನಾನು ಪ್ರತಿದಿನ ಮಕ್ಕಳಿಗೆ ಕ್ಲಾಸ್ ತೆಗೆದುಕೊಳ್ಳುತ್ತಿದ್ದೆ.