ಕರ್ನಾಟಕ

karnataka

ETV Bharat / bharat

ದೆಹಲಿ ಹಿಂಸಾಚಾರ: ಬರೀ ಮನುಷ್ಯರಷ್ಟೇ ಅಲ್ಲ, ಮನುಷ್ಯತ್ವವೂ ಸಾವನ್ನಪ್ಪಿದೆ.. - ನವದೆಹಲಿ ಹಿಂಸಾಚಾರ

ಹಿಂಸಾಚಾರದಲ್ಲಿ ಕೊಲ್ಲಲ್ಪಟ್ಟ ಅಶ್ಫಾಕ್ ಹುಸೇನ್ ಮೃತ ದೇಹಕ್ಕಾಗಿ ಅವರ ಕುಟುಂಬ ಬುಧವಾರದಿಂದ ಆಸ್ಪತ್ರೆಯಲ್ಲಿ ಕಾಯುತ್ತಿದೆ. ದೇಹ ಇನ್ನೂ ಸಿಕ್ಕಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಮೃತ ಹುಸೇನ್ ಫೆಬ್ರವರಿ 14 ರಂದಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಅವರನ್ನು ಕಳೆದುಕೊಂಡ ನೋವು ಒಂದೆಡೆಯಾದರೆ ಆಸ್ಪತ್ರೆಯ ಅಧಿಕಾರಿಗಳ ನಿರ್ಲಕ್ಷ್ಯ ಅವರನ್ನು ಇನ್ನೂ ಕುಗ್ಗಿಸುತ್ತಿದೆ ಎಂದು ಕುಟುಂಸ್ಥರು ನೋವು ತೋಡಿಕೊಂಡಿದ್ದಾರೆ.

Delhi riots: Tales of hardship from families waiting outside GTB Hospital mortuary for bodies
ದೆಹಲಿ ಹಿಂಸಾಚಾರ: ಶವಾಗಾರದ ಹೊರಗೆ ಮೃತ ದೇಹಕ್ಕಾಗಿ ಕಾಯುತ್ತಿರುವವರ ಕಣ್ಣೀರ ಕಥೆ

By

Published : Feb 29, 2020, 12:47 PM IST

ನವದೆಹಲಿ :ದೆಹಲಿ ಹಿಂಸಾಚಾರದ ವೇಳೆ ಸಾವನ್ನಪ್ಪಿದವರ ಶವಗಳನ್ನು ಸಂಬಂಧಪಟ್ಟ ಕುಟುಂಬಸ್ಥರಿಗೆ ತಲುಪಿಸುವಲ್ಲಿ ಜಿಟಿಬಿ ಆಸ್ಪತ್ರೆಯು ವಿಳಂಬಿಸುತ್ತಿದೆ ಎಂದು ಆರೋಪಿಸಿ ಮೃತರ ಕುಟುಂಬಸ್ಥರು ಶುಕ್ರವಾರ ಆಸ್ಪತ್ರೆಯ ಶವಾಗಾರದ ಹೊರಗೆ ಅಳಲು ತೋಡಿಕೊಂಡರು. ಈಶಾನ್ಯ ದೆಹಲಿಯಲ್ಲಿ ನಡೆದ ಕೋಮು ಗಲಭೆಯಲ್ಲಿ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ದುಃಖತಪ್ತ ಸಂಬಂಧಿಗಳು, ತಮ್ಮ ಮೇಲೆ ಕನಿಷ್ಠ ಸಹಾನುಭೂತಿಯನ್ನಾದರೂ ತೋರಬೇಕು ಎಂದು ಅಧಿಕಾರಿಗಳಿಗೆ ಕೇಳಿಕೊಂಡರು.

ಹಿಂಸಾಚಾರದಲ್ಲಿ ಕೊಲ್ಲಲ್ಪಟ್ಟ ಅಶ್ಫಾಕ್ ಹುಸೇನ್ ಮೃತ ದೇಹಕ್ಕಾಗಿ ಅವರ ಕುಟುಂಬ ಬುಧವಾರದಿಂದ ಆಸ್ಪತ್ರೆಯಲ್ಲಿ ಕಾಯುತ್ತಿದೆ. ದೇಹ ಇನ್ನೂ ಸಿಕ್ಕಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಮೃತ ಹುಸೇನ್ ಫೆಬ್ರವರಿ 14 ರಂದಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಅವರನ್ನು ಕಳೆದುಕೊಂಡ ನೋವು ಒಂದೆಡೆಯಾದರೆ ಆಸ್ಪತ್ರೆಯ ಅಧಿಕಾರಿಗಳ ನಿರ್ಲಕ್ಷ್ಯ ಅವರನ್ನು ಇನ್ನೂ ಕುಗ್ಗಿಸುತ್ತಿದೆ ಎಂದು ಕುಟುಂಸ್ಥರು ನೋವು ತೋಡಿಕೊಂಡಿದ್ದಾರೆ.

"ಜಿಟಿಬಿ ಆಸ್ಪತ್ರೆಯಲ್ಲಿ ಒಂದೇ ದಿನದಲ್ಲಿ ಅನೇಕ ಶವಗಳ ಶವಪರೀಕ್ಷೆ ನಡೆಸುವ ಸೌಲಭ್ಯವಿಲ್ಲದಿದ್ದರೆ, ಅವರು ಶವಗಳನ್ನು ಇತರ ಆಸ್ಪತ್ರೆಗಳಿಗೆ ಕಳುಹಿಸಬೇಕಾಗಿತ್ತು. ಅದು ಬಿಟ್ಟು ಶವಗಳನ್ನು ಅಲ್ಲೇ ಕೊಳೆಸಿ ನಿರ್ಲಕ್ಷ್ಯತೆ ಮೆರೆಯುತ್ತಿದ್ದಾರೆ. ಶವಗಳನ್ನು ಫ್ರೀಜರ್‌ನಲ್ಲಿಡದೇ ಇರುವುದರಿಂದ ಅವು ಕೊಳೆತು ವಾಸನೆ ಬರುತ್ತಿವೆ" ಎಂದು ಹುಸೇನ್​ ಸಂಬಂಧಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದು ಒಂದು ಕುಟುಂಬದ ನೋವಾದರೆ, ಇನ್ನೋದು ಕುಟುಂಬ ಉತ್ತರಾಖಂಡದಿಂದ ಮೃತನ ದೇಹ ಪಡೆಯಲು ಬಂದಿದೆ. ಅವರಿಗೆ ಪರಿಚಯವಿಲ್ಲದ ನಗರದಲ್ಲಿ ಕಾಗದದ ಕೆಲಸಕ್ಕಾಗಿ ಅಲೆದಾಡಿಸಲಾಗುತ್ತಿದೆ ಎನ್ನಲಾಗಿದೆ.

ಗಲಭೆಯಲ್ಲಿ ಸಾವನ್ನಪ್ಪಿರುವ ದಿಲ್ಬಾರ್ ಸಿಂಗ್ ನೇಗಿ ಅವರ ಕುಟುಂಬಸ್ಥರು ನೇಗಿಯವರ ಮೃತ ದೇಹ ಪಡೆಯಲು ಹರಸಾಹಸ ಪಡುವಂತಾಗಿದೆ. "ನಮಗೆ ಯಾವ ಪೊಲೀಸ್ ಠಾಣೆ ಎಲ್ಲಿದೆ ಎಂದು ತಿಳಿದಿಲ್ಲ. ಪೂರ್ಣಗೊಳಿಸಲು ಗೋಕಲ್ಪುರಿ ಪೊಲೀಸ್ ಠಾಣೆಗೆ ಹೋಗಲು ನಮ್ಮನ್ನು ಕೇಳಲಾಯಿತು. ಅಲ್ಲಿ ನಮ್ಮನ್ನು ಇಡೀ ದಿನ ಕುಳಿತುಕೊಳ್ಳುವಂತೆ ಮಾಡಿ ನಿರ್ಲಕ್ಷಿಸಲಾಗಿದೆ. ನಾವು ಈಗಾಗಲೇ ದುರಂತ ಅನುಭವಿಸಿದ್ದೇವೆ. ಇಂತ ನಿರ್ಲಕ್ಷ್ಯ ಧೋರಣೆಗಳು ನಮಗೆ ಇನ್ನಷ್ಟು ನೋವುಂಟು ಮಾಡುತ್ತಿವೆ "ಎಂದು ನೇಗಿಯ ಕುಟುಂಬ ಸದಸ್ಯರೊಬ್ಬರು ದುಃಖಪಟ್ಟರು. ಇನ್ನೂ ಹಲವಾರು ಮೃತರ ಕುಟುಂಬಗಳ ಗೋಳು ಇದಕ್ಕಿಂತ ಹೋರತಾಗೇನೂ ಇಲ್ಲ.

ಈ ವಾರದ ಆರಂಭದಲ್ಲಿ ಈಶಾನ್ಯ ದೆಹಲಿಯ ಜಾಫ್ರಾಬಾದ್, ಮೌಜ್ಪುರ್, ಬಾಬರ್ಪುರ್, ಚಂದ್‌ಬಾಗ್, ಶಿವ ವಿಹಾರ್, ಭಜನ್‌ಪುರ, ಯಮುನಾ ವಿಹಾರ್ ಪ್ರದೇಶಗಳಲ್ಲಿ ಉದ್ರಿಕ್ತ ಜನ ಸಮೂಹ ಮನೆಗಳು, ಅಂಗಡಿಗಳು, ವಾಹನಗಳು, ಪೆಟ್ರೋಲ್ ಪಂಪ್ ಮತ್ತು ಸ್ಥಳೀಯರು ಮತ್ತು ಪೊಲೀಸ್ ಸಿಬ್ಬಂದಿಗೆ ಕಲ್ಲು ತೂರಾಟ ನಡೆಸಿ ಗಲಭೆ ಸೃಷ್ಟಿಸಿತ್ತು. ಈ ಹಿಂಸಾಚಾರದಲ್ಲಿ ಕನಿಷ್ಠ 42 ಮಂದಿ ಸಾವನ್ನಪ್ಪಿದ್ದಾರೆ ಮತ್ತು 200ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.

ABOUT THE AUTHOR

...view details