ನವದೆಹಲಿ: ಗುರುಪೂರ್ಣಿಮೆ ದಿನದ ನಿಮಿತ್ತ ಉಡುಪಿ ಪೇಜಾವರ ಮಠಾಧೀಶರಾದ ಶ್ರೀ ವಿಶ್ವೇಶತೀರ್ಥ ಅವರನ್ನ ಪ್ರಧಾನಿ ನರೇಂದ್ರ ಮೋದಿ ಭೇಟಿಯಾಗಿದ್ದಾರೆ.
ಗುರುಪೂರ್ಣಿಮೆ ದಿನ ಪೇಜಾವರ ಶ್ರೀ ಜತೆ ಮೋದಿ... ವಿಶೇಷ ದಿನ ಎಂದು ನಮೋ ಟ್ವೀಟ್! - ನರೇಂದ್ರ ಮೋದಿ
ಉಡುಪಿಯ ಪೇಜಾವರ ಮಠಾಧೀಶರಾದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರನ್ನ ಪ್ರಧಾನಿ ನರೇಂದ್ರ ಮೋದಿ ಭೇಟಿ ಮಾಡಿದ್ದಾರೆ.

ಪೇಜಾವರ ಶ್ರೀ ಜತೆ ಮೋದಿ
ಇದಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡಿರುವ ನರೇಂದ್ರ ಮೋದಿ ಗುರುಪೂರ್ಣಿಮೆ ದಿನದ ಅಂಗವಾಗಿ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅವರೊಂದಿಗೆ ಕಾಲ ಕಳೆದಿರುವುದು ನಿಜಕ್ಕೂ ಅದ್ಭುತ. ಅವರಿಂದ ಕಲಿಯುವುದು ಮತ್ತು ಅವರ ಆಲೋಚನೆಗಳನ್ನು ಕೇಳುವುದು ಬಹಳ ವಿನಮ್ರ ಅನುಭವ ಎಂದು ತಮ್ಮ ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ.
ದೆಹಲಿಯ ಪ್ರಧಾನಿ ಕಚೇರಿಯಲ್ಲಿ ವಿಶ್ವೇಶತೀರ್ಥ ಸ್ವಾಮೀಜಿಯವರನ್ನ ಪ್ರಧಾನಿ ಮೋದಿ ಭೇಟಿಯಾಗಿದ್ದಾರೆ.