ಕರ್ನಾಟಕ

karnataka

ETV Bharat / bharat

ಹೊಟ್ಟೆಯಲ್ಲೇ ಮಗು ಸಾವು.. ನೋವಿನಿಂದ ಒದ್ದಾಡುತ್ತಿದ್ದ ಮಹಿಳೆಯ ಪ್ರಾಣ ಉಳಿಸಿದ ಪೊಲೀಸರು - ದೆಹಲಿಯ ಝಾಕಿರ್​ ನಗರ

ಹೊಟ್ಟೆ ನೋವಿನಿಂದ ಒದ್ದಾಡುತ್ತಿದ್ದ ಮಹಿಳೆಯನ್ನು ಲಾಕ್​ಡೌನ್​​ ಕರ್ತವ್ಯದಲ್ಲಿದ್ದ ದೆಹಲಿಯ ಜಾಮಿಯಾ ಠಾಣೆಯ ಪೊಲೀಸರು ಕ್ಲಿನಿಕ್​ಗೆ ಕರೆದೊಯ್ದು ಆಕೆಯ ಪ್ರಾಣ ಉಳಿಸಿದ್ದಾರೆ.

Policemen save woman's life amid COVID-19 lockdown
ನೋವಿನಿಂದ ಒದ್ದಾಡುತ್ತಿದ್ದ ಮಹಿಳೆಯ ಪ್ರಾಣ ಉಳಿಸಿದ ಪೊಲೀಸರು

By

Published : Apr 21, 2020, 5:37 PM IST

ನವದೆಹಲಿ: ಹೊಟ್ಟೆಯಲ್ಲೇ ಮಗು ಸತ್ತು ಹೋಗಿದ್ದು, ನೋವಿನಿಂದ ಒದ್ದಾಡುತ್ತಿದ್ದ ಮಹಿಳೆಯನ್ನು ಲಾಕ್​ಡೌನ್​​ ನಡುವೆಯೂ ದೆಹಲಿಯ ಝಾಕಿರ್​ ನಗರ ಪ್ರದೇಶದಲ್ಲಿ ಪೊಲೀಸರು ರಕ್ಷಿಸಿದ್ದಾರೆ.

ಬದರ್ಪುರ್​ದ ಭಟ್​ ಕಾಲೋನಿ ನಿವಾಸಿ ನಿರ್ಮಲಾ ಎಂಬವರು ಏಳು ತಿಂಗಳ ಗರ್ಭಿಣಿಯಾಗಿದ್ದು, ಕೆಲ ದಿನಗಳಿಂದ ತೀವ್ರವಾದ ಹೊಟ್ಟೆ ನೋವಿನಿಂದ ಬಳಲುತ್ತಿದ್ದರು. ಬದರ್ಪುರ್​ನಲ್ಲಿ ವೈದ್ಯರೊಬ್ಬರನ್ನು ಭೇಟಿಯಾದಾಗ ಅವರು ಹೊಟ್ಟೆ ಒಳಗೇ ಸತ್ತಿರುವುದಾಗಿ ಹೇಳಿದ್ದು, ಬೇರೆಡೆ ಆಪರೇಷನ್​ ಮಾಡಿಸಿಕೊಳ್ಳುವಂತೆ ತಿಳಿಸಿದ್ದಾರೆ.

ಆದರೆ, ಲಾಕ್​ಡೌನ್​ನಿಂದಾಗಿ ಯಾವೊಂದು ಆಸ್ಪತ್ರೆಯು ಸಿಗದಿದ್ದಾಗ, ಎರಡು ವರ್ಷದ ಹಿಂದೆ ಭೇಟಿ ನೀಡಿದ್ದ ನಹಿದಾ ಫಾತೀಮಾ ಎಂಬ ವೈದ್ಯರೊಬ್ಬರು ನೆನಪಿಗೆ ಬಂದಿದ್ದಾರೆ. ಅವರ ಕ್ಲಿನಿಕ್​ ಬದರ್ಪುರ್​ನಿಂದ 12 ಕಿ.ಮೀ ದೂರದಲ್ಲಿರುವ ಝಾಕಿರ್​ ನಗರದಲ್ಲಿದ್ದು, ಪತಿಯೊಂದಿಗೆ ಅಲ್ಲಿಗೆ ತೆರಳುವ ಮಾರ್ಗಮಧ್ಯೆ ನಿರ್ಮಲಾ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ದಂಪತಿಯನ್ನು ಗಮನಿಸಿದ ಜಾಮಿಯಾ ಪೊಲೀಸ್​ ಠಾಣೆಯ ಎಎಸ್ಐ ಸುಭಾಷ್ ಮತ್ತು ಸಿ.ಟಿ.ರಮಣ್, ಇವರನ್ನು ವಿಚಾರಿಸಿ, ಡಾ.ಫಾತೀಮಾ ಅವರನ್ನು ಸಂಪರ್ಕಿಸಿ ಕ್ಲಿನಿಕ್​ ತೆರೆದು, ಆಪರೇಷನ್​ಗೆ ಸಿದ್ಧತೆ ಮಾಡಿಕೊಳ್ಳುವಂತೆ ಸೂಚಿಸಿದ್ದಾರೆ. ಬಳಿಕ ಅವರ ಖಾಸಗಿ ವಾಹನದಲ್ಲಿ ಕ್ಲಿನಿಕ್​ಗೆ ಕರೆದುಕೊಂಡು ಹೋಗಿರುವುದಾಗಿ ಆಗ್ನೇಯ ದೆಹಲಿ ಡಿಸಿಪಿ ಆರ್​.ಪಿ.ಮೀನಾ ಮಾಹಿತಿ ನೀಡಿದ್ದಾರೆ.

ನಿರ್ಮಲಾರನ್ನು ಕ್ಲಿನಿಕ್​ಗೆ ಕರೆ ತಂದಾಗ ಆಕೆಯ ಪರಿಸ್ಥಿತಿ ಗಂಭೀರವಾಗಿತ್ತು. ಜಾಮಿಯಾ ಪೊಲೀಸರು ಉತ್ತಮ ಕಾರ್ಯ ಮಾಡಿದ್ದಾರೆ. ಇದೀಗ ನಿರ್ಮಲಾ ಆರೋಗ್ಯವಾಗಿದ್ದು, ಡಿಸ್ಚಾರ್ಚ್​ ಆಗಿರುವುದಾಗಿ ಡಾ.ಫಾತೀಮಾ ತಿಳಿಸಿದ್ದಾರೆ.

ಇದು ನಮ್ಮ ಮೊದಲ ಮಗುವಾಗಿತ್ತು. ಆದರೆ ಹೊಟ್ಟೆಯೊಳಗೆ ಮಗು ಮೃತಪಟ್ಟು ಒದ್ದಾಡುತ್ತಿದ್ದ ನನ್ನ ಪತ್ನಿಯನ್ನು ಕಾಪಾಡಿದ ಪೊಲೀಸರು ಮತ್ತು ವೈದ್ಯರಿಗೆ ಧನ್ಯವಾದಗಳು ಎಂದು ನಿರ್ಮಲಾ ಪತಿ ನರೇಶ್​ ಹೇಳಿದ್ದಾರೆ.

ABOUT THE AUTHOR

...view details