ನವದೆಹಲಿ : ರೈತ ಚಳವಳಿಯ ಬಗ್ಗೆ ಟ್ವೀಟ್ ಮಾಡಿದಕ್ಕಾಗಿ ಪರಿಸರ ಕಾರ್ಯಕರ್ತೆ ಗ್ರೇಟಾ ಥನ್ಬರ್ಗ್ ವಿರುದ್ಧ ದೆಹಲಿ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಪರಿಸರ ಹೋರಾಟದ ಮೂಲಕ ಗ್ರೇಟಾ ಥನ್ಬರ್ಗ್ ಸಣ್ಣ ವಯಸ್ಸಿನಲ್ಲೇ ಪ್ರಖ್ಯಾತಿ ಗಳಿಸಿದವರು. ಜನವರಿ 3, 2003 ರಂದು ಸ್ವೀಡನ್ನಲ್ಲಿ ಜನಿಸಿದ ಗ್ರೇಟಾ, ಈಗಾಗಲೇ ವಿಶ್ವ ಸಂಸ್ಥೆ ಸೇರಿದಂತೆ ಹಲವು ದೊಡ್ಡ ದೊಡ್ಡ ಜಾಗತಿಕ ವೇದಿಕೆಗಳಲ್ಲಿ ಭಾಷಣ ಮಾಡಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲೂ ಸಕ್ರಿಯರಾಗಿರುವ ಗ್ರೇಟಾ, ಈ ಹಿಂದೆ ಹಲವು ದೇಶಗಳ ಹೋರಾಟಗಳನ್ನು ಬೆಂಬಲಿಸಿ ಟ್ವೀಟ್ ಮಾಡಿದ್ದಾರೆ. ಈ ಹಿಂದೆ ಜಾಗತಿಕ ತಾಪಮಾನದ ಬಗ್ಗೆ ಗ್ರೇಟಾ ಮಾಡಿದ ಭಾಷಣ ಜಾಗತಿಕ ನಾಯಕ ಗಮನ ಸೆಳೆದಿತ್ತು. ವಿಶ್ವ ಸಂಸ್ಥೆ ಈ ನಿಟ್ಟಿನಲ್ಲಿ ಕೆಲವೊಂದು ನಿರ್ಣಯಗಳನ್ನು ತೆಗೆದುಕೊಂಡಿದೆ.