ನವದೆಹಲಿ: ದೆಹಲಿ ಹಿಂಸಾಚಾರ ಖಂಡಿಸಿ ಸೋನಿಯಾ ಗಾಂಧಿ ನೇತೃತ್ವದ ಕಾಂಗ್ರೆಸ್ ನಿಯೋಗ ರಾಷ್ಟ್ರಭವನಕ್ಕೆ ತೆರಳಿ ರಾಷ್ಟ್ರಪತಿಗೆ ಮನವಿ ಸಲ್ಲಿಸಿದೆ. ನಿಯೋಗದಲ್ಲಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಸೇರಿದಂತೆ ಇತರೆ ನಾಯಕರಿದ್ದರು.
ಜನರಿಗೆ ಅಭಯ ನೀಡಿದ ಜಂಟಿ ಆಯುಕ್ತ:
ಜನರು ಯಾವುದಕ್ಕೂ ಹೆದರಬೇಡಿ. ದಿನಚರಿ ವಸ್ತುಗಳು, ಔಷಧಿ ಅಂಗಡಿಗಳ ಬಾಗಿಲು ತೆಗೆದಿವೆ. ಧೈರ್ಯವಾಗಿಯೇ ಮನೆಯಿಂದ ಹೊರ ಬಂದು ತೆಗೆದುಕೊಳ್ಳಿ ಎಂದು ಜನರಿಗೆ ಜಂಟಿ ಆಯುಕ್ತ ಒಪಿ ಮಿಶ್ರಾ ಅಭಯ ನೀಡಿದ್ದಾರೆ.
ಆಮ್ ಆದ್ಮಿ ಪಾರ್ಟಿಯ ತಾಹೀರ್ ವಿರುದ್ಧ ಗಂಭೀರ ಆರೋಪ, ಸ್ಟಷ್ಟನೆ:
ದೆಹಲಿ ಹಿಂಸಾಚಾರ ಕುರಿತು ಹೇಳಿಕೆ
ಗುಪ್ತಚರ ವಿಭಾಗದ ಅಧಿಕಾರಿ ಅಂಕಿತ್ ಶರ್ಮಾ ಹತ್ಯೆಯಲ್ಲಿ ಎಎಪಿ ಕೌನ್ಸಿಲರ್ ತಾಹೀರ್ ಹುಸೇನ್ ಭಾಗಿಯಾಗಿದ್ದಾರೆ ಎಂಬ ಆರೋಪದ ಮೇಲೆ ಆಪ್ ನಾಯಕ ಸಂಜಯ್ ಸಿಂಗ್ ಮೌನ ಮುರಿದಿದ್ದಾರೆ. ಯಾವುದೇ ವ್ಯಕ್ತಿಯಾಗಲಿ, ಪಕ್ಷವಾಗಲಿ, ಧರ್ಮವಾಗಲಿ. ತಪ್ಪು ಮಾಡಿದ್ದೇ ಆದಲ್ಲಿ ಅವರ ವಿರುದ್ಧ ಪಕ್ಷ ಕ್ರಮ ಕೈಗೊಳ್ಳುತ್ತೆ ಎಂದು ಸಂಜಯ್ ಸಿಂಗ್ ಹೇಳಿದರು.
ಸೇನಾ ಸಮವಸ್ತ್ರದ ಬಗ್ಗೆ ಸೂಚನೆ:
ಕಾನೂನು ಸುವ್ಯವಸ್ಥೆ ಪಾಲನೆ ಮತ್ತು ಉಗ್ರರ ನಿಯಂತ್ರಣ ಅಥವಾ ಪ್ರಭಾವದಲ್ಲಿರುವ ಪ್ರದೇಶಗಳಲ್ಲಿ ಕಾರ್ಯಾಚರಣೆಗೆ ಇಳಿಯುವ ಪೊಲೀಸರು ಮತ್ತು ಅರೆಸೇನಾ ಪಡೆಗಳು ಸೇನೆಯ ಉಡುಗೆಗಳನ್ನು ತೊಡಬಾರದು. ಈ ಕಾರ್ಯಾಚರಣೆಗಳಿಗಾಗಿ ಸೇನಾ ಉಡುಗೆಗಳನ್ನು ತೊಡುವ ಅಗತ್ಯವಿಲ್ಲ. ಅರಣ್ಯ ಪ್ರದೇಶಗಳ ಕಾರ್ಯಾಚರಣೆಯಲ್ಲಿ ಮಾತ್ರ ಯುದ್ಧ ಉಡುಗೆಗಳನ್ನು ಬಳಸಬೇಕು ಎಂದು ಸೇನೆ ಸ್ಪಷ್ಟವಾಗಿ ತಿಳಿಸಿದೆ.