ಕರ್ನಾಟಕ

karnataka

ETV Bharat / bharat

ಮದುಮಗನಿಗೆ ಮದುವೆ ಸ್ಥಳವನ್ನು ತಲುಪಲು ಸಹಕರಿಸಿದ ದೆಹಲಿ ಪೊಲೀಸರು.. - ಆಗ್ನೇಯ ದೆಹಲಿಯ ಗೋವಿಂದಪುರಿ

ಆಗ್ನೇಯ ದೆಹಲಿಯ ಗೋವಿಂದಪುರಿ ಪ್ರದೇಶದ ನಿವಾಸಿ ನರೇಶ್ ಅಹ್ಲುವಾಲಿಯಾ ಅವರ ಮಗ ಕೌಶಲ್ ಮದುವೆಗಾಗಿ ಜಿಕೆಐ ನ ಆರ್ಯ ಸಮಾಜ ಮಂದಿರವನ್ನು ತಲುಪಲು ದೆಹಲಿ ಪೊಲೀಸರು ಸಹಾಯ ಮಾಡಿದ್ದಾರೆ.

Delhi Police helps bridegroom reach wedding venue
ಮದುವೆ ಸ್ಥಳವನ್ನು ತಲುಪಲು ಸಹಕರಿಸಿದ ದೆಹಲಿ ಪೊಲೀಸರು

By

Published : Apr 26, 2020, 2:59 PM IST

ನವದೆಹಲಿ:ಮದುಮಗನೊಬ್ಬ ದಕ್ಷಿಣ ದೆಹಲಿಯ ಗ್ರೇಟರ್ ಕೈಲಾಶ್ ಐ ನಲ್ಲಿ ತನ್ನ ವಿವಾಹದ ಸ್ಥಳವನ್ನು ಪೊಲೀಸ್ ಜಿಪ್ಸಿಯಲ್ಲಿ ಶನಿವಾರ ತಲುಪಿದ್ದಾನೆ.

ಆಗ್ನೇಯ ದೆಹಲಿಯ ಗೋವಿಂದಪುರಿ ಪ್ರದೇಶದ ನಿವಾಸಿ ನರೇಶ್ ಅಹ್ಲುವಾಲಿಯಾ ಅವರು ಪೊಲೀಸರನ್ನು ಸಂಪರ್ಕಿಸಿ ತಮ್ಮ ಮಗ ಕೌಶಲ್ ಅವರ ಮದುವೆಗಾಗಿ ಜಿಕೆಐ ನ ಆರ್ಯ ಸಮಾಜ ಮಂದಿರವನ್ನು ತಲುಪಲು ಸಹಾಯ ಮಾಡುವಂತೆ ವಿನಂತಿಸಿದ್ದರು.

ಕಲ್ಕಾಜಿ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಅಧಿಕಾರಿಯ ಅನುಮತಿಯ ನಂತರ, ಕೌಶಾಲ್ ಮತ್ತು ಅವರ ಹೆತ್ತವರನ್ನು ಸಾಮಾಜಿಕ ಅಂತರ ಕಾಪಾಡಿಕೊಂಡು ಪೊಲೀಸ್ ವಾಹನದಲ್ಲಿ ದೇವಸ್ಥಾನಕ್ಕೆ ಕರೆದೊಯ್ಯಲಾಯಿತು ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಇನ್ನು, ವಧು ಪೂಜಾ, ಅವಳ ತಂದೆ ಮತ್ತು ದೇವಾಲಯದ ಅರ್ಚಕ ವೀರೇಂದ್ರ ಅವರು ಸ್ಥಳದಲ್ಲಿದ್ದು, ಸಂಪ್ರದಾಯದ ಪ್ರಕಾರ ಮದುವೆಯನ್ನು ನಡೆಸಲಾಯಿತು. ಸಮಾರಂಭದ ನಂತರ ಮದುಮಗ ಮತ್ತು ವಧುವನ್ನು ಪೊಲೀಸ್ ಜಿಪ್ಸಿಯಲ್ಲಿ ಕೌಶಲ್ ಅವರ ಮನೆಗೂ ತಲುಪಿಸಲಾಯಿತು ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.

ABOUT THE AUTHOR

...view details