ನವದೆಹಲಿ:ದೇಶದಾದ್ಯಂತ ಲಾಕ್ಡೌನ್ ಘೋಷಣೆ ಮಾಡಿರುವ ಪರಿಣಾಮ ಪೊಲೀಸರ ಬೆಂಗಾವಲಲ್ಲಿ ಮದುಮಗನ ಮೆರವಣಿಗೆ ನಡೆದ ಘಟನೆ ರಾಷ್ಟ್ರ ರಾಜಧಾನಿಯಲ್ಲಿ ನಡೆದಿದೆ.
ಪೊಲೀಸ್ ಬೆಂಗಾವಲಲ್ಲಿ ಮದುಮಗನ ಮೆರವಣಿಗೆ.. ಇದ್ದಿದ್ದು ಇಷ್ಟೇ ಜನ! - Delhi Police escorts baraat
ಕೊರೊನಾ ಸೋಂಕು ಹರಡುವುದನ್ನು ತಡೆಯಲು ಲಾಕ್ಡೌನ್ ಘೋಷಣೆ ಮಾಡಿದ್ದು, ವಾಹನ ಸಂಚಾರ ನಿಷೇಧಿಸಲಾಗಿದೆ. ಇಂತಾ ಸಮಯದಲ್ಲಿ ವರನೊಬ್ಬನಿಗೆ ವಿವಾಹ ಸ್ಥಳ ತಲುಪಲು ಪೊಲೀಸರು ಸಹಾಯ ಮಾಡಿದ್ದಾರೆ

ಗಾಂಧಿ ನಗರ ಸಹಾಯಕ ಪೊಲೀಸ್ ಆಯುಕ್ತ, ಸಿದ್ಧಾರ್ಥ್ ಜೈನ್ ಅವರಿಗೆ ಸ್ಥಳೀಯ ನಿವಾಸಿಯೊಬ್ಬರು ವಿವಾಹದ ಬಗ್ಗೆ ಮಾಹಿತಿ ನೀಡಿದ್ದಾರೆ. ಲಾಕ್ಡೌನ್ ಹಿನ್ನೆಲೆಯಲ್ಲಿ ಪೂರ್ವ ದೆಹಲಿಯ ಉಸ್ಮಾನ್ಪುರದಲ್ಲಿ ನಡೆಯುವ ವಿವಾಹ ಸ್ಥಳವನ್ನು ತಲುಪಲು ಸಹಾಯವನ್ನು ಕೋರಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಾಮಾಜಿಕ ಅಂತರ ನಿಯಮಗಳೊಂದಿಗೆ ಮದುಮಗ, ಹಿಮಾಂಶು ಎಂಬುವವರನ್ನು ಕರೆದುಕೊಂಡು ಗಾಂಧಿ ನಗರದಿಂದ ವಿವಾಹದ ಸ್ಥಳಕ್ಕೆ ಮೆರವಣಿಗೆ ಮೂಲಕ ಕರೆದೊಯ್ಯುವಂತೆ ಸಿದ್ಧಾರ್ಥ್ ಜೈನ್ ಪೊಲೀಸ್ ಸಿಬ್ಬಂದಿಗೆ ನಿರ್ದೇಶನ ನೀಡಿದ್ದಾರೆ. ಈ ಮೆರವಣಿಗೆಯಲ್ಲಿ ಕೇವಲ ನಾಲ್ಕು ಜನರು ಮಾತ್ರ ಭಾಗವಹಿಸಿದ್ದರು. ಅವರ ಖಾಸಗಿ ವಾಹನವನ್ನು ಪೊಲೀಸ್ ಬೆಂಗಾವಲಿನಲ್ಲಿ ಕರೆದೊಯ್ಯಲಾಯಿತು ಎಂದು ತಿಳಿಸಿದ್ದಾರೆ.