ಕರ್ನಾಟಕ

karnataka

ETV Bharat / bharat

ದೆಹಲಿಯಲ್ಲಿ ಕರ್ತವ್ಯನಿರತ ಎಎಸ್​ಐಗೂ ಕೋವಿಡ್; ಏಮ್ಸ್​​ಗೆ ದಾಖಲಿಸಿ ಚಿಕಿತ್ಸೆ - ಎಎಸ್​ಐಗೂ ಕೋವಿಡ್​

ದೆಹಲಿಯಲ್ಲಿ 1,154 ಜನರಲ್ಲಿ ಕೊರೊನಾ ವೈರಸ್​ ಕಾಣಿಸಿಕೊಂಡಿದ್ದು, ನಿನ್ನೆ ಒಂದೇ ದಿನ 85 ಜನರಿಗೆ ಸೋಂಕು ತಗುಲಿದೆ. ಉಳಿದಂತೆ ನಗರದಲ್ಲಿ ಈಗಾಗಾಲೇ ಐವರು ಸಾವನ್ನಪ್ಪಿದ್ದಾರೆ.

Delhi police ASI tests corona+
Delhi police ASI tests corona+

By

Published : Apr 13, 2020, 12:21 PM IST

ನವದೆಹಲಿ: ನವದೆಹಲಿಯಲ್ಲಿ ಕರ್ತವ್ಯನಿರತ ಎಎಸ್​ಐಗೂ ಕೊರೊನಾ ಸೋಂಕು ವಕ್ಕರಿಸಿಕೊಂಡಿದೆ. ಏಮ್ಸ್​​ ಆಸ್ಪತ್ರೆಯ ತುರ್ತು ಸೇವಾ ಘಟಕದಲ್ಲಿ ಇವರು ಕರ್ತವ್ಯ ನಿರ್ವಹಿಸುತ್ತಿದ್ದರು. ಈ ಮೂಲಕ ದೆಹಲಿಯಲ್ಲಿ ಕೋವಿಡ್​​ ಪಾಸಿಟಿವ್​ ಪ್ರಕರಣಕ್ಕೆ ಮೂವರು ಪೊಲೀಸರು ಒಳಗಾಗಿದ್ದಾರೆ.

ನಗರದ ಕ್ಯಾನ್ಸರ್​ ಆಸ್ಪತ್ರೆಯಲ್ಲಿ ಮತ್ತೆ ಮೂವರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಸಹಜವಾಗಿಯೇ ರಾಜಧಾನಿಯ ಜನತೆ ಆತಂಕದಲ್ಲಿದ್ದಾರೆ. ವೈರಾಣು ಬಾಧಿಸಿದ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಂತೆ ಕೆಲವು ಪ್ರದೇಶಗಳನ್ನು ಈಗಾಗಲೇ ಸೀಲ್​ ಡೌನ್‌ ಮಾಡಲಾಗಿದೆ. ಯಾವುದೇ ಕಾರಣಕ್ಕೂ ಈ ಪ್ರದೇಶಗಳಿಗೆ ಲಗ್ಗೆ ಹಾಕದಂತೆ ಮಾಹಿತಿ ನೀಡಲಾಗಿದೆ.

ದೆಹಲಿಯಲ್ಲಿ 1,154 ಜನರಲ್ಲಿ ಕೊರೊನಾ ವೈರಸ್​ ಕಾಣಿಸಿಕೊಂಡಿದ್ದು, ನಿನ್ನೆ ಒಂದೇ ದಿನ 85 ಜನರಿಗೆ ಸೋಂಕು ತಗುಲಿದೆ. ಉಳಿದಂತೆ ಈಗಾಗಾಲೇ ಐವರು ಸಾವನ್ನಪ್ಪಿದ್ದಾರೆ.

ABOUT THE AUTHOR

...view details