ಕರ್ನಾಟಕ

karnataka

ETV Bharat / bharat

ಬಸ್​, ಮೆಟ್ರೋದಲ್ಲಿ ಸಂಪರ್ಕ ರಹಿತ ಟಿಕೆಟಿಂಗ್​ ವ್ಯವಸ್ಥೆ ರೂಪಿಸಿದ ದೆಹಲಿ ಸರ್ಕಾರ - ಸಾರ್ವಜನಿಕ ಸಾರಿಗೆ

ದೆಹಲಿ ಸಾರಿಗೆ ಇಲಾಖೆ ಮತ್ತು ಮೆಟ್ರೋ ಅಧಿಕಾರಿಗಳೊಂದಿಗೆ ಚರ್ಚಿಸಿದ ದೆಹಲಿ ಸಾರಿಗೆ ಸಚಿವ ಕೈಲಾಶ್ ಗಹ್ಲೋಟ್, ಸಂಪರ್ಕ ರಹಿತ ಟಿಕೆಟಿಂಗ್​ನ ಯೋಜನೆ ರೂಪಿಸಿದ್ದಾರೆ.

bus
bus

By

Published : May 16, 2020, 9:02 AM IST

ನವದೆಹಲಿ: ಮೇ 17ರ ಬಳಿಕ ಸಾರ್ವಜನಿಕ ಸಾರಿಗೆಯ ಓಡಾಟದ ಕುರಿತು ಕೇಂದ್ರ ಮತ್ತು ನಗರ ಸರ್ಕಾರಗಳು ತೀರ್ಮಾನ ತೆಗೆದುಕೊಳ್ಳದಿದ್ದರೂ, ದೆಹಲಿ ಸಾರಿಗೆ ಸಚಿವ ಕೈಲಾಶ್ ಗೆಹ್ಲೋಟ್ ಬಸ್‌ ಮತ್ತು ಮೆಟ್ರೊಗಳಲ್ಲಿ ಸಂಪರ್ಕ ರಹಿತ ಟಿಕೆಟಿಂಗ್ ಯೋಜನೆ ರೂಪಿಸಿದ್ದಾರೆ.

ದೆಹಲಿ ಮೆಟ್ರೊ ಮತ್ತು ಬಸ್​ಗಳನ್ನು ಸುರಕ್ಷಿತವಾಗಿರಿಸಲು ದೆಹಲಿ ಸಾರಿಗೆ ಇಲಾಖೆ, ಡಿಟಿಸಿ ಮತ್ತು ಮೆಟ್ರೋ ಅಧಿಕಾರಿಗಳೊಂದಿಗೆ ಚರ್ಚಿಸಿದ್ದೇನೆ ಎಂದು ಸರಣಿ ಟ್ವೀಟ್‌ಗಳಲ್ಲಿ ಅವರು ತಿಳಿಸಿದ್ದಾರೆ.

"ಕೇಂದ್ರ ಸರ್ಕಾರ ಅನುಮತಿಸಿದರೆ, ದೆಹಲಿಯಲ್ಲಿ ಸಾರ್ವಜನಿಕ ಸಾರಿಗೆಯನ್ನು ನಡೆಸುವ ವಿಶ್ವಾಸ ಹೊಂದಿದ್ದೇವೆ" ಎಂದು ಹೇಳಿದ್ದಾರೆ.

ಸಾಮಾಜಿಕ ಅಂತರ, ಸಂಪರ್ಕ ರಹಿತ ಟಿಕೆಟಿಂಗ್ ಮತ್ತು ಸ್ಯಾನಿಟೈಸೇಶನ್ ಮೂಲಕ ಸಾರ್ವಜನಿಕ ಸಾರಿಗೆಯನ್ನು ನಡೆಸುವ ಯೋಜನೆ ಇದೆ ಎಂದು ಗೆಹ್ಲೋಟ್ ತಿಳಿಸಿದ್ದಾರೆ. ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕೂಡಾ ದೆಹಲಿಯಲ್ಲಿ ಸಾರ್ವಜನಿಕ ಸಾರಿಗೆಯನ್ನು ತೆರೆಯುವ ಸುಳಿವು ನೀಡಿದ್ದು, ಕೇಂದ್ರಕ್ಕೂ ಇದನ್ನು ಸೂಚಿಸಿದ್ದಾರೆ.

ABOUT THE AUTHOR

...view details