ನವದೆಹಲಿ: ಕಡ್ಡಾಯವಾದ ಕ್ವಾರಂಟೈನ್ ಅವಧಿ ಪೂರ್ಣಗೊಂಡ ನಂತರ ತಬ್ಲಿಘಿ ಜಮಾತ್ ಸದಸ್ಯರನ್ನು ಮುಕ್ತವಾಗಿ ಹೋಗಲು ಅನುಮತಿಸುವಂತೆ ದೆಹಲಿ ಅಲ್ಪಸಂಖ್ಯಾತ ಆಯೋಗ ಆರೋಗ್ಯ ಸಚಿವರನ್ನು ಕೇಳಿಕೊಂಡಿದೆ.
ಕ್ವಾರಂಟೈನ್ ಅವಧಿ ಪೂರ್ಣಗೊಳಿಸಿದ ತಬ್ಲಿಘಿಗಳ ಬಿಡುಗಡೆಗೊಳಿಸುವಂತೆ ಮನವಿ - ಕಡ್ಡಾಯವಾದ ಕ್ಯಾರೆಂಟೈನ್ ಅವಧಿ
ಕೊರೊನಾ ನೆಗೆಟಿವ್ ವರದಿ ಬಂದ ನಂತರ 14 ದಿನಗಳ ಕ್ವಾರಂಟೈನ್ ಪೂರ್ಣಗೊಳಿಸಿದ ತಬ್ಲಿಘಿ ಜಮಾತ್ ಸದಸ್ಯರನ್ನು ಹೋಗಲು ಅನುಮತಿ ನೀಡಲಾಗಿದೆ. ಈ ಶಿಬಿರಗಳಲ್ಲಿ 28 ದಿನಗಳನ್ನು ಕಳೆದ ಮತ್ತು ಕೊರೊನ ವರದಿ ನೆಗೆಟಿವ್ ಬರುವ ಎಲ್ಲರಿಗೆ ಮನೆಗೆ ಹೋಗಲು ಅವಕಾಶ ನೀಡಬೇಕು ಎಂದು ದೆಹಲಿ ಅಲ್ಪಸಂಖ್ಯಾತ ಆಯೋಗ ಅಧ್ಯಕ್ಷ ಜಾಫ್ರುಲ್ ಇಸ್ಲಾಂ ಖಾನ್ ಮನವಿ ಮಾಡಿದ್ದಾರೆ.
![ಕ್ವಾರಂಟೈನ್ ಅವಧಿ ಪೂರ್ಣಗೊಳಿಸಿದ ತಬ್ಲಿಘಿಗಳ ಬಿಡುಗಡೆಗೊಳಿಸುವಂತೆ ಮನವಿ ಕಡ್ಡಾಯವಾದ ಕ್ಯಾರೆಂಟೈನ್ ಅವಧಿ](https://etvbharatimages.akamaized.net/etvbharat/prod-images/768-512-6953031-858-6953031-1587917543192.jpg)
ದೆಹಲಿ ಅಲ್ಪಸಂಖ್ಯಾತ ಆಯೋಗ ದೆಹಲಿ ಆರೋಗ್ಯ ಸಚಿವ ಸತ್ಯೇಂದರ್ ಜೈನ್ ಅವರಿಗೆ ಪತ್ರ ಬರೆದಿದ್ದು, ಜನರು ಹಜರತ್ ನಿಜಾಮುದ್ದೀನ್‌ನ ಮರ್ಕಾಜ್‌ನಿಂದ ಕ್ವಾರಂಟೈನ್ ಶಿಬಿರಗಳಿಗೆ ಕರೆತಂದಿದ್ದು, ಸೋಮವಾರ 28 ದಿನಗಳು ಪೂರ್ಣಗೊಳ್ಳಲಿವೆ. ಇದು ಡಬ್ಲ್ಯುಎಚ್‌ಒ ಮಾರ್ಗಸೂಚಿಗಳ ಪ್ರಕಾರ ಕೋವಿಡ್-19 ಶಂಕಿತರು ಕಡ್ಡಾಯ ಅವಧಿಯ ದುಪ್ಪಟ್ಟು ದಿನ ಕ್ವಾರಂಟೈನ್ನಲ್ಲಿದ್ದರು.
ಸೋಂಕಿತ ವ್ಯಕ್ತಿಯಲ್ಲಿ ಕೊರೊನಾ ವೈರಸ್ ಲಕ್ಷಣಗಳು ಕಾಣಿಸಿಕೊಳ್ಳಲು 14 ದಿನಗಳು ಬೇಕು. ಆದರೆ ಇವರು 28 ದಿನಗಳನ್ನು ಪೂರೈಸಿದ್ದಾರೆ. ಈ ಜನರನ್ನು ಅನಗತ್ಯವಾಗಿ ಬಂಧನದಲ್ಲಿಡಲಾಗಿದೆ ಎಂದರ್ಥ. ಕೊರೊನಾ ನೆಗೆಟಿವ್ ವರದಿ ಬಂದ ನಂತರ 14 ದಿನಗಳ ಕ್ವಾರಂಟೈನ್ ಪೂರ್ಣಗೊಳಿಸಿದವರಿಗೆ ಹೋಗಲು ಅನುಮತಿ ನೀಡಲಾಗಿದೆ. ಈ ಶಿಬಿರಗಳಲ್ಲಿ 28 ದಿನಗಳನ್ನು ಕಳೆದ ಮತ್ತು ಕೊರೊನ ವರದಿ ನೆಗೆಟಿವ್ ಬರುವ ಎಲ್ಲರಿಗೆ ಮನೆಗೆ ಹೋಗಲು ಅವಕಾಶ ನೀಡಬೇಕು. ಇಲ್ಲವೇ ದೆಹಲಿಯಲ್ಲಿ ಬೇರೆಲ್ಲಿಯಾದರೂ ವಾಸಿಸಲು ಅವಕಾಶ ನೀಡಬೇಕು ಎಂದು ಆಯೋಗದ ಅಧ್ಯಕ್ಷ ಜಾಫ್ರುಲ್ ಇಸ್ಲಾಂ ಖಾನ್ ಮನವಿ ಮಾಡಿದ್ದಾರೆ.