ನವದೆಹಲಿ: ಕೊರೊನಾ ಭೀತಿಯಲ್ಲಿ ಆಂತರಿಕ ಕಂದಾಯ ಸೇವೆ (IRS) ಅಧಿಕಾರಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಷ್ಟ್ರ ರಾಜಧಾನಿಯಲ್ಲಿ ನಡೆದಿದೆ.
'ನನ್ನಿಂದಾಗಿ ಕುಟುಂಬದವರಿಗೆ ಕೊರೊನಾ ಹರಡುವುದು ಬೇಡ'... ಡೆತ್ ನೋಟ್ ಬರೆದಿಟ್ಟು IRS ಅಧಿಕಾರಿ ಆತ್ಮಹತ್ಯೆ - ದೆಹಲಿಯ ಆಂತರಿಕ ಕಂದಾಯ ಸೇವೆ ಅಧಿಕಾರಿ
ಕೋವಿಡ್ ಪರೀಕ್ಷೆ ವರದಿ ನೆಗಟಿವ್ ಬಂದಿತ್ತಾದರೂ ನನ್ನಿಂದಾಗಿ ನನ್ನ ಕುಟುಂಬದವರಿಗೆ ಕೊರೊನಾ ಸೋಂಕು ಹರಡುವುದು ಬೇಡವೆಂದು ಆಂತರಿಕ ಕಂದಾಯ ಸೇವೆ (IRS) ಅಧಿಕಾರಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ದೆಹಲಿಯ ದ್ವಾರಕಾ ಪ್ರದೇಶದಲ್ಲಿ ಕಾರಿನೊಳಗೆ ಆ್ಯಸಿಡ್ ತರಹದ ದ್ರಾವಣವನ್ನು ಕುಡಿದು ಅಧಿಕಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಕಾರಿನೊಳಗೆ ಡೆತ್ ನೋಟ್ ಕೂಡ ಸಿಕ್ಕಿದ್ದು, 'ನನ್ನಿಂದ ನನ್ನ ಕುಟುಂಬದವರಿಗೆ ಕೊರೊನಾ ಸೋಂಕು ಹರಡುವುದು ಬೇಡ, ನನ್ನಿಂದಾಗಿ ಅವರು ಬಳಲುವುದು ಬೇಡ' ಎಂದು ಬರೆದಿದ್ದಾರೆ.
ಒಂದು ವಾರದ ಹಿಂದೆ ಮೃತ IRS ಅಧಿಕಾರಿ ಕೋವಿಡ್ ಪರೀಕ್ಷೆಗೆ ಒಳಗಾಗಿದ್ದರು. ವರದಿ ನೆಗಟಿವ್ ಬಂದಿತ್ತು. ಆದರೂ ಕೂಡ ತನ್ನಿಂದಾಗಿ ಮಹಾಮಾರಿ ತನ್ನ ಕುಟುಂಬದವರಿಗೆ ಅಂಟುವುದು ಬೇಡ ಅಂತಾ ಈ ನಿರ್ಧಾರ ಮಾಡಿದ್ದಾರೆ ಎಂದು ದಕ್ಷಿಣ ದ್ವಾರಕಾ ಠಾಣೆಯ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.