ಕರ್ನಾಟಕ

karnataka

ETV Bharat / bharat

ಐಎನ್​​​​​​ಎಕ್ಸ್ ಮೀಡಿಯಾ ಹಗರಣ : ಚಿದಂಬರಂಗೆ ಬೇಲಾ? ಜೈಲಾ? - ಪಿ.ಚಿದಂಬರಂ ಜಾಮೀನು ಅರ್ಜಿಯ ತೀರ್ಪು

ಐಎನ್​​​​​​ಎಕ್ಸ್ ಮೀಡಿಯಾ ಹಗರಣದಲ್ಲಿ ಸದ್ಯ ತಿಹಾರ್​ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಜಾಮೀನು ಅರ್ಜಿಯ ತೀರ್ಪು ಇಂದು ಹೊರಬೀಳುವ ಸಾಧ್ಯತೆಯಿದೆ.

ಚಿದಂಬರಂ

By

Published : Nov 15, 2019, 10:14 AM IST

ನವದೆಹಲಿ: ಐಎನ್​​​​​​ಎಕ್ಸ್ ಮೀಡಿಯಾ ಹಗರಣದಲ್ಲಿ ಸದ್ಯ ತಿಹಾರ್​ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಜಾಮೀನು ಅರ್ಜಿಯ ತೀರ್ಪು ಇಂದು ಹೊರಬೀಳುವ ಸಾಧ್ಯತೆಯಿದೆ.

ದೆಹಲಿ ಹೈಕೋರ್ಟ್​​ನಲ್ಲಿ ಜಾಮೀನು ಕೋರಿ ಪಿ.ಚಿದಂಬರಂ ಅರ್ಜಿ ಸಲ್ಲಿಸಿದ್ದರು. ಈಗಾಗಲೇ ಚಿದಂಬರಂ ಮತ್ತು ಜಾರಿ ನಿರ್ದೇಶನಾಲಯದ ಪರ ವಕೀಲರ ವಾದವನ್ನ ಆಲಿಸಿರುವ ದೆಹಲಿ ಹೈಕೋರ್ಟ್​ ನ್ಯಾ.ಸುರೇಶ್ ಕೈಟ್​, ನವೆಂಬರ್ 8 ರಂದು ತೀರ್ಪು ಕಾಯ್ದಿರಿಸಿದ್ದರು.

ಸಿಬಿಐ ಹಾಗೂ ಜಾರಿ ನಿರ್ದೇಶನಾಲಯ ಪ್ರತ್ಯೇಕ ಕೇಸ್​ಗಳನ್ನ ದಾಖಲಿಸಿದ್ದು, ಸದ್ಯ ಸಿಬಿಐ ದಾಖಲಿಸಿದ್ದ ಕೇಸ್​​ನಲ್ಲಿ ಅಕ್ಟೋಬರ್ 22 ರಂದು ಚಿದಂಬರಂಗೆ ಜಾಮೀನು ಸಿಕ್ಕಿದೆ. ಆದರೆ ಜಾರಿ ನಿರ್ದೇಶನಾಲಯ ದಾಖಲಿಸಿದ್ದ ಪ್ರಕರಣದಲ್ಲಿ ಇನ್ನೂ ಜಾಮೀನು ಸಿಕ್ಕಿಲ್ಲ. ಪ್ರಸ್ತುತ ತಿಹಾರ್ ಜೈಲಿನಲ್ಲಿರುವ ಚಿದಂಬರಂ ನ್ಯಾಯಾಂಗ ಬಂಧನದ ಅವಧಿ ನವೆಂಬರ್ 27 ರ ವರೆಗೂ ಇದೆ. ಹಾಗಾಗಿ ಇಂದು ಜಾಮೀನು ಸಿಕ್ಕಿದಲ್ಲಿ ತಿಹಾರ್​ನಿಂದ ಚಿದಂಬರಂ ಬಿಡುಗಡೆಯಾಗಲಿದ್ದಾರೆ.

ABOUT THE AUTHOR

...view details