ಕರ್ನಾಟಕ

karnataka

By

Published : Jan 15, 2020, 1:36 PM IST

ETV Bharat / bharat

ಹೈಕೋರ್ಟ್​​ನಲ್ಲಿ ಇಂದು ಮರಣ ದಂಡನೆ ಶಿಕ್ಷೆ ತಡೆ ಅರ್ಜಿ ವಿಚಾರಣೆ

ನಿನ್ನೆಯಷ್ಟೇ ನಿರ್ಭಯಾ ಪ್ರಕರಣದ ನಾಲ್ವರಲ್ಲಿ ಇಬ್ಬರು ಅಪರಾಧಿಗಳಾದ ವಿನಯ್ ಶರ್ಮಾ ಮತ್ತು ಮುಖೇಶ್ ಸಿಂಗ್, ಸಲ್ಲಿಸಿದ್ದ ಕ್ಯುರೇಟಿವ್‌ ಅರ್ಜಿಯನ್ನು ಸುಪ್ರೀಂಕೋರ್ಟ್‌ ವಜಾಗೊಳಿಸಿತ್ತು. ಇಂದು ಮತ್ತೆ ಅಪರಾಧಿ ಮುಕೇಶ್​ ಸಿಂಗ್​, ಮರಣ ದಂಡನೆಗೆ ತಡೆ ಕೋರಿ ಸಲ್ಲಿಸಿರುವ ಅರ್ಜಿಯನ್ನು ದೆಹಲಿ ಹೈಕೋರ್ಟ್ ವಿಚಾರಣೆ ನಡೆಸಲಿದೆ.

Delhi HC
ದೆಹಲಿ ಹೈಕೋರ್ಟ್

ನವದೆಹಲಿ:ಮರಣ ದಂಡನೆ ತೀರ್ಪಿಗೆ ತಡೆ ಕೋರಿ, ನಿರ್ಭಯಾ ಅತ್ಯಾಚಾರ ಅಪರಾಧಿಯಾದ ಮುಕೇಶ್​ ಸಿಂಗ್​ ಸಲ್ಲಿಸಿರು ಅರ್ಜಿಯನ್ನು ದೆಹಲಿ ಹೈಕೋರ್ಟ್​ ಇಂದು ವಿಚಾರಣೆ ನಡೆಸಲಿದೆ.

2012ರ ನಿರ್ಭಯಾ ತ್ಯಾಚಾರ ಆರೋಪಿಗಳಿಗೆ ಈಗಾಗಲೇ ಗಲ್ಲು ಶಿಕ್ಷೆ ಕಾಯಂ ಆಗಿದೆ. ನಿನ್ನೆಯಷ್ಟೇ ನಿರ್ಭಯಾ ಪ್ರಕರಣದ ನಾಲ್ವರಲ್ಲಿ ಇಬ್ಬರು ಅಪರಾಧಿಗಳಾದ ವಿನಯ್ ಶರ್ಮಾ ಮತ್ತು ಮುಖೇಶ್ ಸಿಂಗ್, ಸಲ್ಲಿಸಿದ್ದ ಕ್ಯುರೇಟಿವ್‌ ಅರ್ಜಿಯನ್ನು ಸುಪ್ರೀಂಕೋರ್ಟ್‌ ವಜಾಗೊಳಿಸಿತ್ತು. ಇಂದು ಮತ್ತೆ ಅಪರಾಧಿ ಮುಕೇಶ್​ ಸಿಂಗ್​, ಮರಣ ದಂಡನೆಗೆ ತಡೆ ಕೋರಿ ಸಲ್ಲಿಸಿರುವ ಅರ್ಜಿಯನ್ನು ದೆಹಲಿ ಹೈಕೋರ್ಟ್ ವಿಚಾರಣೆ ನಡೆಸಲಿದೆ. ಕಳೆದ ಮಂಗಳವಾರ ಈತ ದೆಹಲಿ ಹೈಕೋರ್ಟ್​ ಮೆಟ್ಟಿಲೇರಿದ್ದ.

ನ್ಯಾಯಮೂರ್ತಿ ಮನಮೋಹನ್ ಮತ್ತು ನ್ಯಾಯಮೂರ್ತಿ ಸಂಗೀತ ಧಿಂಗ್ರಾ ಸೆಹಗಲ್ ಅವರ ವಿಭಾಗೀಯ ಪೀಠವು ಅರ್ಜಿಯ ವಿಚಾರಣೆ ನಡೆಸಲಿದ್ದಾರೆ.

ನಿನ್ನೆಯಷ್ಟೇ ಅಪರಾಧಿಗಳು ಸಲ್ಲಿಸಿದ್ದ ಕ್ಯುರೇಟಿವ್​​ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಎನ್.ವಿ.ರಮಣ, ಅರುಣ್ ಮಿಶ್ರಾ, ಆರ್.ಎಫ್.ನಾರಿಮನ್, ಆರ್. ಭಾನುಮತಿ ಮತ್ತು ಅಶೋಕ್ ಭೂಷಣ್ ಅವರಿದ್ದ ನ್ಯಾಯಪೀಠ ವಿಚಾರಣೆ ನಡೆಸಿ, ಅರ್ಜಿ ವಜಾಗೊಳಿಸಿತ್ತು.

ABOUT THE AUTHOR

...view details