ನವದೆಹಲಿ:ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯುಮಾಲಿನ್ಯ ಕೈಮೀರಿದ್ದು, ಈ ವಿಚಾರಕ್ಕೆ ಕೇಜ್ರಿವಾಲ್ ಸರ್ಕಾರವನ್ನುದೆಹಲಿ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.
ದೆಹಲಿ ಹಾಗೂ ರಾಜಧಾನಿಗೆ ಹೊಂದಿಕೊಂಡಿರುವ ಹಲವು ಪ್ರದೇಶಗಳಲ್ಲಿ ಕಳೆದೊಂದು ತಿಂಗಳಿನಿಂದ ವಾಯುಮಾಲಿನ್ಯ ತೀರಾ ಹೆಚ್ಚಳವಾಗಿದೆ. ಇದನ್ನು ಹತೋಟಿಗೆ ತರುವಲ್ಲಿ ದೆಹಲಿ ಸರ್ಕಾರ ಸಂಪೂರ್ಣವಾಗಿ ಸೋತಿದೆ ಎಂದು ದೆಹಲಿ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಮಿತಿ ಮೀರಿದ ವಾಯು ಮಾಲಿನ್ಯ: ಹೊಟ್ಟೆಪಾಡಿಗಾಗಿ ಮಾಸ್ಕ್ ಇಲ್ಲದೇ ಟ್ರಾಫಿಕ್ ಸಿಗ್ನಲ್ಗಳಲ್ಲಿ ಮಕ್ಕಳಿಂದ ವ್ಯಾಪಾರ!
ವಾಯುಮಾಲಿನ್ಯವನ್ನು ನಿಯಂತ್ರಣ ತರುವ ನಿಟ್ಟಿನಲ್ಲಿ ಸರ್ಕಾರ ನಿರ್ದಿಷ್ಟ ಯೋಜನೆಗಳನ್ನು ಜಾರಿಗೊಳಿಸುವಲ್ಲಿ ಹಿಂದೆಬಿದ್ದಿದ್ದೇ ಸದ್ಯ ದೊಡ್ಡ ಸಮಸ್ಯೆಯಾಗಿದೆ. ಹಾಗೆಯೇ ಸರ್ಕಾರದ ಜೊತೆಯಲ್ಲಿ ಇತರೆ ಸಂಬಂಧಿತ ಅಧಿಕಾರಿಗಳ ಇಚ್ಛಾಶಕ್ತಿಯ ಕೊರತೆಯಿಂದ ದೆಹಲಿ ನಿವಾಸಿಗಳು ಕೆಟ್ಟ ಗಾಳಿ ಉಸಿರಾಡುವಂತಾಗಿದೆ ಎಂದು ಹೈಕೋರ್ಟ್ ಛೀಮಾರಿ ಹಾಕಿದೆ.
ದೆಹಲಿಯಲ್ಲಿ ಹೆಚ್ಚುತ್ತಿರುವ ಮಾಲಿನ್ಯದ ಬಗ್ಗೆ ಸಲ್ಲಿಕೆಯಾದ ಸುಮೋಟೋ ಅರ್ಜಿಯ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್, ವಾಯುಮಾಲಿನ್ಯ ನಿಯಂತ್ರಣ ಮಾಡುವಲ್ಲಿ ಸರ್ಕಾರದ ವೈಫಲ್ಯಕ್ಕೆ ಇಂದು ಕೋರ್ಟ್ ಗರಂ ಆಯಿತು.
ಕುಸಿಯುತ್ತಾ ಸಾಗುತ್ತಿದೆ ದೆಹಲಿ ವಾಯು ಗುಣಮಟ್ಟ, 'ಹವಾಮಾನ ತುರ್ತು ಪರಿಸ್ಥಿತಿ'ಗೆ ಜನರು ಹೈರಾಣ!