ಕರ್ನಾಟಕ

karnataka

ETV Bharat / bharat

ಗಾಂಜಾ ಬಳಕೆಯನ್ನು ಅಪರಾಧ ಪ್ರಕರಣದಿಂದ ಕೈಬಿಡುವಂತೆ ಹೈಕೋರ್ಟ್​ಗೆ ಅರ್ಜಿ - Janja

ಜನರನ್ನು ನಶೆಯಲ್ಲಿ ತೇಲಿಸುವ ಮಾದಕ ವಸ್ತು ಗಾಂಜಾ ಬಳಕೆಯನ್ನು ಅಪರಾಧ ಪ್ರಕರಣದಿಂದ ಹೊರಗಿಡುವಂತೆ ಕೋರಿ ದೆಹಲಿ ಹೈಕೋರ್ಟ್​ಗೆ ಅರ್ಜಿಯೊಂದು ಸಲ್ಲಿಕೆಯಾಗಿದೆ.

ಭಾರತದಲ್ಲಿ ಗಾಂಜಾ ಬಳಕೆ

By

Published : Jul 21, 2019, 8:37 AM IST

ನವದೆಹಲಿ: ಭಾರತದಲ್ಲಿ ಗಾಂಜಾ ಬಳಕೆಯನ್ನು ನ್ಯಾಯಸಮ್ಮತಗೊಳಿಸುವಂತೆ ಕೋರಿ ದೆಹಲಿ ಹೈಕೋರ್ಟ್‌ನಲ್ಲಿ ಮನವಿ ಸಲ್ಲಿಸಲಾಗಿದೆ.

ಮಾದಕ ದ್ರವ್ಯ ಮತ್ತು ಸೈಕೋಟ್ರೋಪಿಕ್ ವಸ್ತುಗಳ ಕಾಯ್ದೆ, 1985 ಮತ್ತು ಮಾದಕ ದ್ರವ್ಯ ಮತ್ತು ಸೈಕೋಟ್ರೋಪಿಕ್ ವಸ್ತುಗಳ ನಿಯಮ,1985 ರ ನಿಯಮವನ್ನು ಪ್ರಶ್ನಿಸಿ ಗ್ರೇಟ್ ಲೆಜಿಸ್ಲೇಷನ್ ಇಂಡಿಯಾ ಮೂವ್​ಮೆಂಟ್​ ಟ್ರಸ್ಟ್ ಈ ಅರ್ಜಿಯನ್ನು ಸಲ್ಲಿಸಿದೆ. ಈ ಕಾಯ್ದೆಯನ್ವಯ ಗಾಂಜಾ ಅಥವಾ ಕೈಗಾರಿಕಾ ಸೆಣಬಿನ ಬಳಕೆಯನ್ನು ನಿಷೇಧಿಸುತ್ತದೆ ಹಾಗೂ ಅಪರಾಧೀಕರಿಸುತ್ತದೆ. ಹಾಗಾಗಿ, ಅದಕ್ಕೆ ಸಂಬಂಧಿಸಿದ ಚಟುವಟಿಕೆಗಳಿಗೆ ನಿಗಧಿತ ನಿರ್ಬಂಧವನ್ನು ವಿಧಿಸುವುದರ ಕುರಿತು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

ಇನ್ನು ಈ ಪ್ರಕರಣಕ್ಕೆ ಸಂಬಂಧಪಟ್ಟ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಜಿ.ಎಸ್. ಸಿಸ್ತಾನಿ ಮತ್ತು ಜ್ಯೋತಿ ಸಿಂಗ್ ಅವರ ವಿಭಾಗೀಯ ಪೀಠದ ಮುಂದೆ ಸಲ್ಲಿಸಲಾಗಿದೆ.

ಸಂಸ್ಥೆಯ ಪರ ಅರ್ಜಿ ಸಲ್ಲಿಸಿದ ವಕೀಲರಾದ ಅವಿನಾಶ್ ಕೆ ಶರ್ಮಾ ಮತ್ತು ಅಶುತೋಷ್ ನಗರ್ ಮಾತನಾಡಿ​, ಗಾಂಜಾದ ಬಳಕೆಯನ್ನು ಸಂಪೂರ್ಣವಾಗಿ ನಿಯಂತ್ರಿಸಲು ಪ್ರಯತ್ನಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿದೆಯಾದರರೂ, ಯಾವುದೇ ನಿಯಮಗಳಿಗಾದರೂ "ಸಮಂಜಸವಾದ ನಿರ್ಬಂಧ" ದ ಅವಶ್ಯಕತೆ ಇರಬೇಕು ಎಂದಿದ್ದಾರೆ.

ಗಾಂಜಾದಲ್ಲಿ ವಿವಿಧ ಔಷಧೀಯ ಗುಣವಿದೆ ಎಂಬುದಕ್ಕೆ ಈ ಹಿಂದಿ ನೀಡಲಾದ ಕೆಲವು ವಿವಿಧ ವೈಜ್ಞಾನಿಕ ಸಂಶೋಧನಾ ಪ್ರಬಂಧ ಮತ್ತು ವರದಿಯನ್ನು ನ್ಯಾಯಾಲಯದ ಮುಂದಿಟ್ಟಿದೆ. ಈ ಸಸ್ಯವು ಪರಿಣಾಮಕಾರಿ ನೋವು ನಿವಾರಕವಾಗಿದೆ ಮತ್ತು ದೀರ್ಘಕಾಲದ ನೋವಿನ ಸಂದರ್ಭಗಳಲ್ಲಿ ಸಹಾಯ ಮಾಡುತ್ತದೆ. (Parkinson) ಪಾರ್ಕಿನ್ಸನ್ ಕಾಯಿಲೆಯಿಂದ ಬಳಲುತ್ತಿರುವವರಿಗೆ ಇದು ಉಪಕಾರಿಯಾಗಲಿದೆ ಎಂದು ವರದಿಗಳು ಹೇಳಿವೆ ಅನ್ನೋದನ್ನು ಅರ್ಜಿದಾರರು ಪ್ರತಿಪಾದಿಸಿದ್ದಾರೆ.

ಇತರೆ ಹಾನಿಕಾರಕ ಮತ್ತು ಮಾರಕ ರಾಸಾಯನಿಕಗಳಿಗೆ ಸಮನಾಗಿ ಗಾಂಜಾವನ್ನು ಸಂಸ್ಕರಿಸುವುದು ಅನಿಯಂತ್ರಿತ, ಅವೈಜ್ಞಾನಿಕ ಎಂಬುದು ಅರ್ಜಿದಾರರ ವಾದವಾಗಿದ್ದು, ಈ ಕುರಿತ ವಿಚಾರಣೆಯನ್ನು ಜುಲೈ 29ಕ್ಕೆ ಮುಂದೂಡಲಾಗಿದೆ.

ಇನ್ನು ಇದೇ ವಿಷಯವನ್ನು ಆಧರಿಸಿದಂತೆ ಸಸ್ಯದ ಬಳಕೆಯನ್ನು ನ್ಯಾಯಸಮ್ಮತಗೊಳಿಸುವ ಕುರಿತು ನ್ಯಾಯಾಲಯಗಳನ್ನು ಸಂಪರ್ಕಿಸಿರುವುದು ಇದೇ ಮೊದಲ ಬಾರಿಗೇನಲ್ಲ. ಇತ್ತೀಚೆಗೆ, ಹಿಮಾಚಲ ಪ್ರದೇಶ ಹೈಕೋರ್ಟ್ ಕೂಡ ಔಷಧೀಯ ಮತ್ತು ಕೈಗಾರಿಕಾ ಸಸ್ಯಗಳ ಬಳಕೆಯನ್ನು ಕಾನೂನುಬದ್ಧಗೊಳಿಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳುವಂತೆ ಸರ್ಕಾರಕ್ಕೆ ಆದೇಶಿಸಿತ್ತು.

For All Latest Updates

TAGGED:

Janja

ABOUT THE AUTHOR

...view details