ಕರ್ನಾಟಕ

karnataka

ETV Bharat / bharat

ನರ್ಸಿಂಗ್ ಹೋಂಗಳನ್ನು ಕೋವಿಡ್ ಕೇಂದ್ರಗಳಾಗಿ ಪರಿವರ್ತಿಸುವ ಆದೇಶ ಹಿಂಪಡೆದ  ಸರ್ಕಾರ - ಆದೇಶ ಹಿಂಪಡೆದ ಕೇಜ್ರಿವಾಲ್ ಸರ್ಕಾರ

ನಗರದ ಎಲ್ಲ ನರ್ಸಿಂಗ್​ ಹೋಂಗಳನ್ನು ಕೋವಿಡ್​ ಕೇಂದ್ರಗಳಾಗಿ ಪರಿವರ್ತಿಸಬೇಕು ಮತ್ತು ಕನಿಷ್ಠ 10 ರಿಂದ 49 ಹಾಸಿಗೆಗಳು ಹೊಂದಿರಬೇಕೆಂಬ ಆದೇಶವನ್ನು ದೆಹಲಿ ಸರ್ಕಾರ ಹಿಂಪಡೆದಿದೆ.

Delhi govt withdraws order to convert nursing homes into COVID centres
ನರ್ಸಿಂಗ್ ಹೋಂಗಳಿಗೆ ನೀಡಲಾಗಿದ್ದ ಆದೇಶ ಹಿಂಪಡೆದ ದೆಹಲಿ ಸರ್ಕಾರ

By

Published : Jun 15, 2020, 8:26 AM IST

ನವದೆಹಲಿ :ನಗರದ ಎಲ್ಲ ನರ್ಸಿಂಗ್ ಹೋಂಗಳನ್ನು ಕೋವಿಡ್​ ಚಿಕಿತ್ಸಾ ಕೇಂದ್ರಗಳಾಗಿ ಪರಿವರ್ತಿಸಬೇಕು ಮತ್ತು 10 ರಿಂದ 49 ಹಾಸಿಗೆಗಳು ಹೊಂದಿರಬೇಕು ಎಂಬ ಆದೇಶವನ್ನು ಸರ್ಕಾರ ಹಿಂತೆಗೆದುಕೊಂಡಿದೆ.

ದೆಹಲಿ ನರ್ಸಿಂಗ್ ಹೋಮ್ಸ್ ನೋಂದಣಿ (ತಿದ್ದುಪಡಿ) ಕಾಯ್ದೆ 2011ರ, ನಿಯಮ 14, ಶೆಡ್ಯೂಲ್​ 14.1ರಡಿ ಜೂನ್​ 14 ರಂದು ಆದೇಶ ಹೊರಡಿಸಿದ್ದ ಸರ್ಕಾರ, ದೆಹಲಿ ನರ್ಸಿಂಗ್ ಹೋಮ್ಸ್ ನೋಂದಣಿ ಕಾಯ್ದೆ, 1953 ರಡಿ ನೋಂದಾಯಿತ ಎಲ್ಲ ನರ್ಸಿಂಗ್​ ಹೋಂಗಳು ಕನಿಷ್ಠ 10 ರಿಂದ 49 ಹಾಸಿಗೆಗಳನ್ನು ಹೊಂದಿರಬೇಕು ಮತ್ತು ಕೋವಿಡ್​ ಚಿಕಿತ್ಸಾ ಕೇಂದ್ರವಾಗಿ ಘೋಷಿಸಬೇಕು ಎಂಬ ಆದೇಶವನ್ನು ಹೊರಡಿಸಿತ್ತು. ಇದೀಗ ಆದೇಶವನ್ನು ಹಿಂಪಡೆದಿದೆ.

ಆದೇಶದಲ್ಲಿ ಸ್ವತಂತ್ರ ಕೇಂದ್ರಗಳಾದ ಕಣ್ಣು,ಇಎನ್‌ಟಿ, ಡಯಾಲಿಸಿಸ್ ಚಿಕಿತ್ಸಾಲಯಗಳು ಮತ್ತು ಹೆರಿಗೆ ಕೇಂದ್ರಗಳಿಗೆ ವಿನಾಯಿತಿ ನೀಡಲಾಗಿತ್ತು. ರಾಷ್ಟ್ರ ರಾಜಧಾನಿಯಲ್ಲಿ ಭಾನುವಾರ ಒಟ್ಟು 2,224 ಹೊಸ ಪಾಸಿಟಿವ್ ಪ್ರಕಣಗಳು ವರದಿಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 41,182 ಕ್ಕೆ ತಲುಪಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ

ABOUT THE AUTHOR

...view details