ಕರ್ನಾಟಕ

karnataka

ETV Bharat / bharat

3.14 ಲಕ್ಷ ವಿದ್ಯಾರ್ಥಿಗಳ ₹ 57.20 ಕೋಟಿ ಪರೀಕ್ಷಾ ಶುಲ್ಕ ಪಾವತಿಸಲಿದೆ ಕೇಜ್ರಿವಾಲ್​ ಸರ್ಕಾರ - ದೆಹಲಿ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​

ದೆಹಲಿ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದೆ. ರಾಜ್ಯದ 10 ಮತ್ತು12ನೇ ತರಗತಿಯಲ್ಲಿ ಸಿಬಿಎಸ್​ಸಿ ಪರೀಕ್ಷೆ ಎದುರಿಸುತ್ತಿರುವ ಒಟ್ಟು 3.14 ಲಕ್ಷ ವಿದ್ಯಾರ್ಥಿಗಳ ಪರೀಕ್ಷಾ ಶುಲ್ಕವನ್ನು ಖುದ್ದು ಸರ್ಕಾರವೇ ಕಟ್ಟಲಿದೆ.

₹ 57.20 ಕೋಟಿ ಪರೀಕ್ಷಾ ಶುಲ್ಕ ಪಾವತಿಸಲಿದೆ ಕೇಜ್ರಿವಾಲ್​ ಸರ್ಕಾರ

By

Published : Sep 18, 2019, 7:59 PM IST

ನವದೆಹಲಿ:ಇಲ್ಲಿನ 10 ಮತ್ತು12ನೇ ತರಗತಿಯಲ್ಲಿ ಸಿಬಿಎಸ್​ಸಿ ಪರೀಕ್ಷೆ ಎದುರಿಸುತ್ತಿರುವ ವಿದ್ಯಾರ್ಥಿಗಳಿಗೆ ಸರ್ಕಾರ ಶುಭಸುದ್ದಿ ಕೊಟ್ಟಿದೆ. ಒಟ್ಟು 3.14 ಲಕ್ಷ ವಿದ್ಯಾರ್ಥಿಗಳ ಪರೀಕ್ಷಾ ಶುಲ್ಕವನ್ನು ಖುದ್ದು ಸರ್ಕಾರವೇ ಕಟ್ಟಲಿದೆ.

ಈ ಕುರಿತ ಪ್ರಸ್ತಾವನೆಯನ್ನು ಇಂದು ದೆಹಲಿ ಸರ್ಕಾರ ಅನುಮೋದಿಸಿದೆ. 2019-20ರ ಶೈಕ್ಷಣಿಕ ವರ್ಷದಲ್ಲಿ ಸರ್ಕಾರದ ಆಡಳಿತ ವ್ಯಾಪ್ತಿಗೆ ಬರುವ ಎಲ್ಲಾ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ವಿದ್ಯಾರ್ಥಿಗಳ ಶುಲ್ಕವನ್ನು ಸ್ವತಃ ಸರ್ಕಾರವೇ ಭರಿಸಲಿದೆ.

ದೆಹಲಿ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಾಗಿದ್ದು, ಒಟ್ಟು 3.14 ಲಕ್ಷ ವಿದ್ಯಾರ್ಥಿಗಳ ವಾರ್ಷಿಕ ಸುಮಾರು 57.20 ಕೋಟಿ ರೂ. ಶುಲ್ಕವನ್ನು ಸರ್ಕಾರ ಕಟ್ಟಬೇಕಿದೆ.

ಇದನ್ನೂ ಓದಿ: LLB-LLM ಪಠ್ಯಕ್ರಮಕ್ಕೆ 'ತ್ರಿವಳಿ ತಲಾಖ್'​ ಕಾನೂನು ಅಧ್ಯಾಯ ಸೇರಿಸಿಕೊಂಡ ಬರೇಲಿ ವಿವಿ

ಈ ಶುಲ್ಕವು ವಿಜ್ಞಾನ ವಿಭಾಗದ ವಿದ್ಯಾರ್ಥಿಗಳ ಪ್ರಾಯೋಗಿಕ ಪರೀಕ್ಷೆಯ ಶುಲ್ಕ ಸೇರಿದಂತೆ ಎಲ್ಲಾ ಶುಲ್ಕಗಳನ್ನು ಒಳಗೊಂಡಿದೆ. ಹೀಗಾಗಿ 10 ಮತ್ತು 12 ನೇ ತರಗತಿಯ ಸಿಬಿಎಸ್​ಇ ವಿದ್ಯಾರ್ಥಿಗಳು ಯಾವುದೇ ಶುಲ್ಕಗಳನ್ನು ಕಟ್ಟಬೇಕಾಗಿಲ್ಲ.

ABOUT THE AUTHOR

...view details