ಹೈದರಾಬಾದ್: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ತೆಲಂಗಾಣದಲ್ಲಿ ಭಾರಿ ಮಳೆಯಾಗಿದ್ದು, ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಪಾಸ್ತಿ ನಷ್ಟವಾಗಿದೆ.
ತೆಲಂಗಾಣದ ಈ ಸಂಕಷ್ಟದ ಸಮಯದಲ್ಲಿ ದೆಹಲಿ ಸರ್ಕಾರ ನೆರವಿನ ಹಸ್ತ ಚಾಚಿದ್ದು, 15 ಕೋಟಿ ರೂಪಾಯಿ ನೀಡಿದೆ. ಸಿಎಂ ಅರವಿಂದ್ ಕೇಜ್ರಿವಾಲ್ ನೆರೆ ಪೀಡಿತ ಪರಿಹಾರ ಕಾರ್ಯಗಳಿಗಾಗಿ 15 ಕೋಟಿ ರೂಪಾಯಿ ನೀಡಿದ್ದು, ತೆಲಂಗಾಣ ಸರ್ಕಾರದ ಜತೆ ನಾವಿದ್ದೇವೆ ಎಂದು ಭರವಸೆ ನೀಡಿದ್ದಾರೆ.
ರಾಜ್ಯದಲ್ಲಿ ಕಳೆದೊಂದು ವಾರದಲ್ಲಿ ಸುರಿದ ಭಾರಿ ಮಳೆಗೆ 70 ಜನರು ಮೃತಪಟ್ಟಿದ್ದಾರೆ. 1908 ರ ಬಳಿಕ ಹೈದರಾಬಾದ್ನಲ್ಲಿ ಅತಿ ಹೆಚ್ಚು ಹಾನಿವುಂಟು ಮಾಡಿದ ಮಳೆ ಇದಾಗಿದೆ. ಹತ್ತಾರು ಹಳ್ಳಿಗಳಿಗೆ ನೀರು ನುಗ್ಗಿ 37 ಸಾವಿರ ಜನರನ್ನ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಎಂದು ಎಂದು ಸಚಿವ ಕೆ.ಟಿ. ರಾಮಾರಾವ್ ತಿಳಿಸಿದ್ದಾರೆ.
ಪ್ರಾಥಮಿಕ ವರದಿಯ ಪ್ರಕಾರ ರಾಜ್ಯದಲ್ಲಿ ಈವರೆಗೆ 5 ಸಾವಿರ ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.