ಕರ್ನಾಟಕ

karnataka

ETV Bharat / bharat

ಕನ್ಹಯ್ಯ ಕುಮಾರ್​ ವಿರುದ್ಧದ ದೇಶದ್ರೋಹ ಪ್ರಕರಣ: ​ವಿಚಾರಣೆಗೆ ದೆಹಲಿ ಸರ್ಕಾರದ ಅನುಮತಿ

ಜೆಎನ್​​ಯು ಮಾಜಿ ಅಧ್ಯಕ್ಷ, ಸಿಪಿಐಎಂ ಮುಖಂಡ ಕನ್ಹಯ್ಯ ಕುಮಾರ್​ ವಿರುದ್ಧ ದಾಖಲಾಗಿರುವ ದೇಶದ್ರೋಹ ಆರೋಪ ಪ್ರಕರಣದ ವಿಚಾರಣೆ ನಡೆಸಲು ಇದೀಗ ದೆಹಲಿ ಸರ್ಕಾರ ಅನುಮತಿ ನೀಡಿದೆ.

Kanhaiya Kumar
Kanhaiya Kumar

By

Published : Feb 28, 2020, 8:41 PM IST

ನವದೆಹಲಿ: 2016ರಲ್ಲಿ ದೆಹಲಿಯ ಜವಾಹರ್​ಲಾಲ್​ ನೆಹರೂ ವಿಶ್ವವಿದ್ಯಾಲಯದಲ್ಲಿ ದೇಶದ್ರೋಹದ ಘೋಷಣೆ ಕೂಗಿದ ಆರೋಪಕ್ಕೆ ಸಂಬಂದಿಸಿದಂತೆ ಕನ್ಹಯ್ಯ ಕುಮಾರ್ ಅವರನ್ನು​ ವಿಚಾರಣೆಗೊಳಪಡಿಸಲು ದೆಹಲಿ ಸರ್ಕಾರ ಅನುಮತಿ ನೀಡಿದೆ.

ಈ ಹಿಂದೆ ಕನ್ಹಯ್ಯ ಕುಮಾರ್​ ಭಾಷಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಲು ಅನುಮತಿ ನೀಡುವಂತೆ ದೆಹಲಿ ಸರ್ಕಾರಕ್ಕೆ ನಿರ್ದೇಶನ ನೀಡಲು ಪೊಲೀಸ್​ ಇಲಾಖೆ ಸುಪ್ರೀಂಕೋರ್ಟ್​​​ ಮೆಟ್ಟಿಲೇರಿತ್ತು. ಆದರೆ ಈ ವಿಷಯದಲ್ಲಿ ತಾನು ಮಧ್ಯಪ್ರವೇಶ ಮಾಡುವುದಿಲ್ಲ ಎಂದು ಸುಪ್ರೀಂಕೋರ್ಟ್​ ಹೇಳಿಕೆ ನೀಡಿತ್ತು. ಇದಾದ ಬಳಿಕ ದೆಹಲಿ ಪೊಲೀಸರು ಜೆಎನ್​ಯು ಅಧ್ಯಕ್ಷ ಕನ್ಹಯ್ಯ ಕುಮಾರ್​​ ಹಾಗೂ ಇತರರ ವಿರುದ್ಧ ಚಾರ್ಜ್​ಶೀಟ್​ ಸಲ್ಲಿಸಿದ್ದು, ವಿಚಾರಣೆ ನಡೆಸಲು ಅನುಮತಿ ನೀಡುವಂತೆ ದೆಹಲಿ ಸರ್ಕಾರಕ್ಕೆ ಮನವಿ ಮಾಡಿಕೊಂಡಿತ್ತು.

ಜೆಎನ್ ಯು ಆವರಣದಲ್ಲಿ ಫೆಬ್ರವರಿ 9, 2016ರಂದು ನಡೆದ ಕಾರ್ಯಕ್ರಮದಲ್ಲಿ ದೇಶ ವಿರೋಧಿ ಘೋಷಣೆ ಕೂಗಿದ ಆರೋಪದ ಮೇಲೆ ಜೆಎನ್​ಯು ಮಾಜಿ ವಿದ್ಯಾರ್ಥಿಗಳಾದ ಕನ್ಹಯ್ಯ ಕುಮಾರ್, ಉಮರ್ ಖಾಲಿದ್, ಅಖಿಬ್ ಹುಸೇನ್, ಮುಜೀಬ್ ಹುಸೇನ್, ಮುನೀಬ್ ಹುಸೇನ್, ಉಮರ್ ಗುಲ್, ರಯೀಬ್, ಬಸೀರ್ ಭಟ್ ಮತ್ತು ಬಶರತ್ ವಿರುದ್ಧ 2019 ರ ಜನವರಿಯಲ್ಲಿ ಚಾರ್ಜ್​ಶೀಟ್​ ದಾಖಲಿಸಲಾಗಿತ್ತು.

ABOUT THE AUTHOR

...view details