ಕರ್ನಾಟಕ

karnataka

ETV Bharat / bharat

ಕಠಿಣ ಹವಾಮಾನ ಪರಿಸ್ಥಿತಿಯಲ್ಲೂ ಮುಂದುವರೆದ ರೈತರ ಪ್ರತಿಭಟನೆ

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿ ಗಡಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆ 39ನೇ ದಿನಕ್ಕೆ ಕಾಲಿಟ್ಟಿದೆ. ಮಳೆ ಮತ್ತು ಶೀತ ವಾತಾವರಣವನ್ನೂ ಲೆಕ್ಕಿಸದೇ ಅನ್ನದಾತರು ಪ್ರತಿಭಟಿಸುತ್ತಿದ್ದಾರೆ..

Delhi: Farmers continue to hold sit-in protest at Ghazipur
ಕಠಿಣ ಹವಾಮಾನ ಪರಿಸ್ಥಿತಿಯಲ್ಲೂ ಮುಂದುವರೆದ ರೈತರ ಪ್ರತಿಭಟನೆ

By

Published : Jan 3, 2021, 10:46 AM IST

ದೆಹಲಿ: ಮಳೆ ಮತ್ತು ಶೀತ ವಾತಾವರಣದ ನಡುವೆಯೂ ಘಾಝಿಪುರ (ದೆಹಲಿ-ಯುಪಿ ಗಡಿ) ದಲ್ಲಿ ರೈತರು ತಮ್ಮ ಪ್ರತಿಭಟನೆ ಮುಂದುವರಿಸಿದ್ದಾರೆ.

ಈ ಸುದ್ದಿಯನ್ನೂ ಓದಿ:ಮಾತುಕತೆ ವಿಫಲವಾದರೆ ಮಾಲ್​, ಪೆಟ್ರೋಲ್​ ಪಂಪ್​ ಬಂದ್ ಎಚ್ಚರಿಕೆ!

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿ ಗಡಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆ 39ನೇ ದಿನಕ್ಕೆ ಕಾಲಿಟ್ಟಿದೆ. ಈಗಾಗಲೇ 6 ಸುತ್ತಿನ ಮಾತುಕತೆ ನಡೆಸಿದ್ರೂ ಕೇಂದ್ರದಿಂದ ನಿರೀಕ್ಷಿತ ಫಲ ಸಿಕ್ಕಿಲ್ಲ. ಪರಿಣಾಮ ಇಂದು ಮಳೆ ಮತ್ತು ಶೀತ ವಾತಾವರಣವನ್ನೂ ಲೆಕ್ಕಿಸದೇ ಪ್ರತಿಭಟನೆ ನಡೆಸುತ್ತಿದ್ದಾರೆ ರೈತರು.

ಈ ಸುದ್ದಿಯನ್ನೂ ಓದಿ:ರೈತರ ಬೇಡಿಕೆ ಈಡೇರಿಸದಿದ್ರೆ ಜ.26ಕ್ಕೆ 'ಕಿಸಾನ್‌ ಗಂಟಾಂತರ ಪರೇಡ್'- ಯೋಗೇಂದ್ರ ಯಾದವ್‌

ಪ್ರತಿಭಟನಾಕಾರರೊಬ್ಬರು ಮಾತನಾಡಿ, ನಾವು ನಮ್ಮ ಕುಟುಂಬಸ್ಥರಿಂದ ದೂರವಿದ್ದು, ಸದ್ಯ ಇಂತಹ ಕಠಿಣ ಹವಾಮಾನ ಪರಿಸ್ಥಿತಿಯಲ್ಲೂ ಪ್ರತಿಭಟನೆ ನಡೆಸುತ್ತಿದ್ದೇವೆ. ನಾಳೆ ಸರ್ಕಾರ ನಮ್ಮ ಬೇಡಿಕೆಗಳನ್ನು ಈಡೇರಿಸುತ್ತದೆಯೆಂದು ಭಾವಿಸಿದ್ದೇನೆ ಎಂದು ತಿಳಿಸಿದರು.

ABOUT THE AUTHOR

...view details