ನವದೆಹಲಿ: ಇಲ್ಲಿನ ಲಕ್ಷ್ಮಿ ನಗರದ ಕಿಶನ್ ಗಂಜ್ನಲ್ಲಿರುವ ವಸತಿ ಕಟ್ಟಡವೊಂದರಲ್ಲಿ ಇಂದು ಬೆಳಗ್ಗೆ ಬೆಂಕಿ ಕಾಣಿಸಿಕೊಂಡಿತ್ತು. ಈ ವೇಳೆ, ಪ್ಲಾಟ್ನಲ್ಲಿ ಸಿಲುಕಿದ್ದ ಒಂದೇ ಕುಟುಂಬದ ಮೂವರನ್ನು ಅಗ್ನಿಶಾಮಕ ಸಿಬ್ಬಂದಿ ರಕ್ಷಿಸಿದ್ದಾರೆ.
17 ಪ್ಲಾಟ್ಗಳ ವಸತಿ ಕಟ್ಟಡದಲ್ಲಿ ಅಗ್ನಿ ಅವಘಡ: ಒಂದೇ ಕುಟುಂಬದ ಮೂವರ ರಕ್ಷಣೆ - ದೆಹಲಿ ಬೆಂಕಿ ಅನಾಹುತ ಸುದ್ದಿ
ವಸತಿ ಕಟ್ಟಡವೊಂದರಲ್ಲಿ ಬೆಂಕಿ ಕಾಣಿಸಿಕೊಂಡು, ಒಳಗೆ ಸಿಲುಕಿದ್ದ ಮೂವರನ್ನು ಅಗ್ನಿಶಾಮಕ ಸಿಬ್ಬಂದಿ ರಕ್ಷಿಸಿರುವ ಘಟನೆ ದೆಹಲಿಯ ಲಕ್ಷ್ಮಿ ನಗರದಲ್ಲಿ ನಡೆದಿದೆ.
ವಸತಿ ಕಟ್ಟಡದಲ್ಲಿ ಬೆಂಕಿ
ಆದಿಲ್ (52 ), ಇಶ್ರತ್ ಆದಿಲ್ (45), ಅಲಿ ಆದಿಲ್ (12)ನನ್ನು ಅಗ್ನಿಶಾಮಕ ಸಿಬ್ಬಂದಿ ರಕ್ಷಿಸಿದ್ದಾರೆ. ಬೆಂಕಿಯಿಂದಾಗಿ ಪ್ಲಾಟ್ ತುಂಬೆಲ್ಲ ಹೊಗೆ ಆವರಿಸಿತ್ತು. ಅದರ ನಡುವೆ ಸಿಲುಕಿದ್ದ ಈ ಮೂವರನ್ನು ರಕ್ಷಿಸಲಾಗಿದೆ. ಘಟನೆಯಲ್ಲಿ ಯಾವುದೇ ಸಾವು - ನೋವಿನ ಬಗ್ಗೆ ವರದಿಯಾಗಿಲ್ಲ.
ಸುಮಾರು 17 ಪ್ಲಾಟ್ಗಳನ್ನು ಹೊಂದಿರುವ ಕಟ್ಟಡದ ಮೀಟರ್ ಬೋರ್ಡ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಘಟನೆಯಿಂದಾಗಿ ಏಳು ಸ್ಕೂಟರ್ ಮತ್ತು ನಾಲ್ಕು ಬೈಕ್ಗಳು ಸೇರಿದಂತೆ 11 ದ್ವಿಚಕ್ರ ವಾಹನಗಳಿಗೆ ಬೆಂಕಿ ತಗುಲಿದೆ ಎಂದು ಅಗ್ನಿ ಶಾಮಕ ದಳ ಸಿಬ್ಬಂದಿ ತಿಳಿಸಿದ್ದಾರೆ.
Last Updated : Aug 20, 2020, 1:41 PM IST