ಕರ್ನಾಟಕ

karnataka

ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಶೇ 62.59 ಮತದಾನ

2020ರ ನವದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಶೇ. 62.59 ಮತದಾನ ಪ್ರಮಾಣ ದಾಖಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

By

Published : Feb 9, 2020, 8:22 PM IST

Published : Feb 9, 2020, 8:22 PM IST

Updated : Feb 9, 2020, 8:31 PM IST

Delhi Election Commission,ದೆಹಲಿ ವಿಧಾನಸಭೆ ಚುನಾಣೆ
ರಣಬೀರ್ ಸಿಂಗ್

ನವದೆಹಲಿ: ಶನಿವಾರ ನಡೆದ ನವದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಶೇ. 62.59 ಮತದಾನ ಪ್ರಮಾಣ ದಾಖಲಾಗಿದೆ ಎಂದು ದೆಹಲಿ ಮುಖ್ಯ ಚುನಾವಣಾಧಿಕಾರಿ ರಣಬೀರ್ ಸಿಂಗ್ ಮಾಹಿತಿ ನೀಡಿದ್ದಾರೆ.

ರಣಬೀರ್ ಸಿಂಗ್, ದೆಹಲಿ ಮುಖ್ಯ ಚುನಾವಣಾಧಿಕಾರಿ

ಚುನಾವಣಾ ಪ್ರಕ್ರಿಯೆಯಲ್ಲಿ ಕಾರ್ಯನಿರತವಾಗಿದ್ದ ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಲಾಗಿದೆ. ಅವರೆಲ್ಲ ರಾತ್ರಿಯಿಡೀ ಕಾರ್ಯನಿರತರಾಗಿದ್ದರು. ಹೀಗಾಗಿ ಅಂಕಿಅಂಶ ತಿಳಿಸುವುದು ತಡವಾಗಿದೆ. ಅಂಕಿಅಂಶಗಳ ಬಗ್ಗೆ ನಿಖರತೆಯನ್ನು ಖಚಿತಪಡಿಸಿಕೊಳ್ಳುವುದು ಬಹಳ ಮುಖ್ಯವಾಗಿದೆ ಎಂದು ಮಾಹಿತಿ ನೀಡಲು ತಡವಾಗಿದ್ದಕ್ಕೆ ಕಾರಣ ತಿಳಿಸಿದ್ದಾರೆ.

2019ರ ಲೋಕಸಭೆ ಚುನಾವಣೆಗೆ ಹೋಲಿಕೆ ಮಾಡಿದರೆ ಮತದಾನದ ಶೇ. 2 ರಷ್ಟು ಹೆಚ್ಚು ದಾಖಲಾಗಿದೆ. ಆದರೆ 2015ರ ವಿಧಾನಸಭೆ ಚುನಾವಣೆಯಲ್ಲಿ 67 ರಷ್ಟು ಮತದಾನವಾಗಿತ್ತು. ಇದಕ್ಕೆ ಹೋಲಿಕೆ ಮಾಡಿದರೆ 5 ರಷ್ಟು ಮತದಾನದ ಪ್ರಮಾಣ ಕಡಿಮೆ ದಾಖಲಾಗಿದೆ ಎಂದು ತಿಳಿಸಿದ್ದಾರೆ.

ಬಲ್ಲಿಮರನ್ ವಿಧಾನಸಭಾ ಕ್ಷೇತ್ರದಲ್ಲಿ 71.6 ರಷ್ಟು ಅತಿ ಹೆಚ್ಚು ಮತದಾನದ ಪ್ರಮಾಣ ದಾಖಲಾಗಿದ್ದರೆ, ದೆಹಲಿ ಕಂಟೋನ್ಮೆಂಟ್‌ನಲ್ಲಿ ಅತಿ ಕಡಿಮೆ ಮತದಾನ ಪ್ರಮಾಣ ಶೇ.45.4 ರಷ್ಟಿದೆ ಎಂದು ತಿಳಿಸಿದ್ದಾರೆ.

Last Updated : Feb 9, 2020, 8:31 PM IST

ABOUT THE AUTHOR

...view details