ನವದೆಹಲಿ:ಬಿಜೆಪಿ ಮುಖಂಡ ಮನೀಷ್ ಗಾಯ್ ನಿವಾಸದೊಳಗೆ ನುಗ್ಗಿ ಗಲಾಟೆ ಮಾಡಿರುವ ಆರೋಪಕ್ಕಾಗಿ ದೆಹಲಿ ವಿಧಾನಸಭೆ ಸ್ಪೀಕರ್ ಹಾಗೂ ಆಮ್ ಆದ್ಮಿ ಪಕ್ಷದ ಶಾಸಕ ರಾಮ್ ನಿವಾಸ್ ಗೋಯಲ್ ವಿರುದ್ಧ ಡೆಲ್ಲಿ ಕೋರ್ಟ್ ಕಠಿಣ ಕ್ರಮ ಕೈಗೊಂಡಿದೆ.
ನಿವಾಸದೊಳಗೆ ನುಗ್ಗಿ ಗಲಭೆ ಮತ್ತು ನೋವನ್ನುಂಟು ಮಾಡಿರುವ ಆರೋಪದ ಮೇಲೆ ಅವರಿಗೆ 6 ತಿಂಗಳ ಕಾಲ ಜೈಲುಶಿಕ್ಷೆ ವಿಧಿಸಿ ಕೋರ್ಟ್ ಮಹತ್ವದ ಆದೇಶ ಹೊರಹಾಕಿದೆ.
2015ರ ದೆಹಲಿ ವಿಧಾನಸಭೆ ಚುನಾವಣೆ ವೇಳೆ ಎಎಪಿ ಶಾಸಕ ರಾಮ್ ನಿವಾಸ್ ತನ್ನ ಬೆಂಬಲಿಗರೊಂದಿಗೆ ಬಿಜೆಪಿ ಅಭ್ಯರ್ಥಿ ಮನೀಷ್ ಗಾಯ್ ನಿವಾಸದೊಳಗೆ ನುಗ್ಗಿ ಗಲಾಟೆ ಮಾಡಿದ್ದರು. ಘಟನೆಗೆ ಸಂಬಂಧಿಸಿದಂತೆ ಬಿಜೆಪಿ ಮುಖಂಡ ದೂರು ದಾಖಲು ಮಾಡಿದ್ದರು. ಕಳೆದ ನಾಲ್ಕು ವರ್ಷಗಳಿಂದ ವಾದ - ಪ್ರತಿವಾದ ಆಲಿಸಿರುವ ಕೋರ್ಟ್ ಇಂದು ಮಹತ್ವದ ಆದೇಶ ಹೊರಹಾಕಿದೆ.
ಆದರೆ, ತಮ್ಮ ಮೇಲೆ ಕೇಳಿ ಬಂದಿರುವ ಆರೋಪ ತಳ್ಳಿ ಹಾಕಿದ್ದ ಆಮ್ ಆದ್ಮಿ ಪಕ್ಷದ ಶಾಸಕ ರಾಮ್ ನಿವಾಸ್ ತಾವು ಆ ರೀತಿಯಾಗಿ ನಡೆದುಕೊಂಡಿಲ್ಲ ಎಂದು ಹೇಳಿಕೆ ನೀಡಿದ್ದರು.