ನವದೆಹಲಿ: ಕೊರೊನಾ ವೈರಸ್ ನಿಯಂತ್ರಣಕ್ಕೆ ದೇಶದಲ್ಲಿ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ. ಎರಡು ದಿನದ ಹಿಂದೆ ಕೇಂದ್ರ ಸರ್ಕಾರ ಕೆಲ ಸಡಿಲಿಕೆಗಳನ್ನು ಮಾಡಿ ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಈ ಮಧ್ಯೆ ದೆಹಲಿಯ ತೀಸ್ ಹಜಾರಿ ಕೋರ್ಟ್ನಲ್ಲಿ ಸ್ಟ್ಯಾಂಪ್(ಅಂಚೆ ಚೀಟಿ) ಬಳಕೆಗೆ ಸಂಬಂಧಿಸಿದಂತೆ ಹೊಸ ಆದೇಶ ಹೊರಡಿಸಲಾಗಿದೆ.
ಕೊರೊನಾ ಆತಂಕ... ಕೋರ್ಟ್ ದಾಖಲೆ ಪತ್ರಗಳಿಗೆ ಸ್ಟ್ಯಾಂಪ್ ಹಚ್ಚುವ ಮುನ್ನ ಈ ಸುದ್ದಿ ಓದಿ
ದೆಹಲಿ ತೀಸ್ ಹಜಾರಿ ಕೋರ್ಟ್ ಸ್ಟ್ಯಾಂಪ್(ಅಂಚೆ ಚೀಟಿ) ಬಳಕೆಗೆ ಸಂಬಂಧಿಸಿದಂತೆ ಹೊಸ ಆದೇಶ ಹೊರಡಿಸಿದೆ. ನ್ಯಾಯಾಲಯದ ಶುಲ್ಕ ಮತ್ತು ಅರ್ಜಿಗಳಿಗೆ ಬಳಸುವ ಅಂಚೆಚೀಟಿಗಳನ್ನು ಮುದ್ರೆ ಮಾಡಲು ಬಳಸಬಾರದು ಎಂದು ಹೇಳಿದೆ.
ಕೊರೊನಾ ಆತಂಕ
ಹೌದು, ಯಾವುದೇ ಲೆಕ್ಕಪತ್ರ, ಕೋರ್ಟ್ಗೆ ಬರುವ ಪ್ರಕರಣಗಳಿಗೆ ಸಂಬಂಧಿಸಿದ ದಾಖಲೆ ಪತ್ರಗಳಿಗೆ ಸ್ಟ್ಯಾಂಪ್ ಬಳಸುವಾಗ ಅದಕ್ಕೆ ಎಂಜಲು ಹಚ್ಚಿ ಬಳಸದಂತೆ ಜಿಲ್ಲಾ ನ್ಯಾಯಾಧೀಶ ಗಿರೀಶ್ ಕಥ್ಪಾಲಿಯಾ ಆದೇಶ ಹೊರಡಿಸಿದ್ದಾರೆ. ಕೋರ್ಟ್ನ ಸಿಬ್ಬಂದಿ ಮತ್ತು ವಕೀಲರಿಗೂ ಈ ನಿಯಮ ಅನ್ವಯಿಸಲಿದೆ ಎಂದು ಅವರು ಹೇಳಿದ್ದಾರೆ.
ನ್ಯಾಯಾಲಯದ ಶುಲ್ಕ ಮತ್ತು ಅರ್ಜಿಗಳಿಗೆ ಬಳಸುವ ಅಂಚೆಚೀಟಿಗಳನ್ನು ಮುದ್ರೆ ಮಾಡಲು ಬಳಸಬಾರದು ಎಂದು ಹೇಳಿದೆ. ಅಂಚೆ ಚೀಟಿಗಳಿಗೆ ಎಂಜಲು ಹಚ್ಚುವ ಬದಲು ಪ್ಲಾಸ್ಟಿಕ್ ಸ್ಪಂಜ್ ಹೊಂದಿರುವ ಡ್ಯಾಂಪರ್ ಪ್ಯಾಡ್ ಬಳಸುವಂತೆ ನ್ಯಾಯಾಧೀಶರು ಸೂಚಿಸಿದ್ದಾರೆ.