ನವದೆಹಲಿ:ನಿರ್ಭಯಾ ಅಪರಾಧಿಗಳಿಗೆ ಜನವರಿ 22ರಂದು ಬೆಳಿಗ್ಗೆ 7ಗಂಟೆಗೆ ಗಲ್ಲಿಗೇರಿಸುವ ಕುರಿತು ದೆಹಲಿ ನ್ಯಾಯಾಲಯ ನೀಡಿದ ಡೆತ್ ವಾರೆಂಟ್ ಅನ್ನು ನಿರ್ಭಯಾ ಪೋಷಕರೂ ಸೇರಿದಂತೆ ದೇಶದ ಜನತೆ ಸ್ವಾಗತಿಸಿದ್ದಾರೆ.
ನನ್ನ ಮಗಳಿಗೆ ಜಯ ಸಿಕ್ಕಿದೆ. ಇದು ನನ್ನ ಮಗಳಿಗಲ್ಲ, ದೇಶದ ಎಲ್ಲಾ ಹೆಣ್ಣು ಮಕ್ಕಳಿಗೆ ಸಂದ ಜಯ. ಅಪರಾಧಿಗಳಿಗೆ ಗಲ್ಲು ವಿಧಿಸುವ ಮೂಲಕ ದೇಶದ ಮಹಿಳೆಯರಿಗೆ ಶಕ್ತಿ ತುಂಬಿದಂತಾಗಿದೆ ಎಂದು ಹೇಳಿದರು.
ಈ ದಿನಕ್ಕಾಗಿ ತುಂಬಾ ದಿನಗಳು ಕಾಯಬೇಕಾಯಿತು. ಕಾದದ್ದಕ್ಕೂ ಉತ್ತಮವಾದ ತೀರ್ಪು ಬಂದಿದೆ. ಜನತೆಗೆ ನ್ಯಾಯಾಂಗ ವ್ಯವಸ್ಥೆಯ ಮೇಲೆಯೂ ನಂಬಿಕೆ ಹೆಚ್ಚಾಗಿದೆ ಎಂದರು.
ಈ ತೀರ್ಪು ದೇಶದಲ್ಲಿ ಭಾರೀ ಮಟ್ಟದಲ್ಲಿ ಬದಲಾವಣೆ ತರಲಿದೆ. ಮುಂದೆ ಅತ್ಯಾಚಾರ, ಲೈಂಗಿಕ ಕಿರುಕುಳ ಪ್ರಕರಣಗಳು ಕಡಿಮಯಾಗಲಿವೆ. ಜನ ಭಯಪಡುತ್ತಾರೆ ಎಂದು ನಿರ್ಭಯಾ ತಂದೆ ಬದ್ರಿನಾಥ್ ಸಿಂಗ್ ಹೇಳಿದ್ದಾರೆ.