ನವದೆಹಲಿ: ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರಿಗೆ ಮರಣ ದಂಡನೆ ವಿಧಿಸಿದ್ದು, ಈ ನಾಲ್ವರ ಪೈಕಿ ಪವನ್ ಲಾಲ್ ಗುಪ್ತಾ ತಂದೆ ಹೀರಾ ಲಾಲ್ ಗುಪ್ತಾ ಈ ಹಿಂದೆ ನ್ಯಾಯಾಲಯ ತಳ್ಳಿ ಹಾಕಿದ್ದ ಪ್ರತ್ಯಕ್ಷದರ್ಶಿ ದೂರಿನ ಆದೇಶವನ್ನು ಪರಿಷ್ಕರಿಸುವಂತೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ಜಡ್ಜ್ ಕೆ ಜೈನ್ ಅರ್ಜಿಯನ್ನ ತಳ್ಳಿಹಾಕಿದ್ದಾರೆ.
ನಿರ್ಭಯಾ ಅಪರಾಧಿ ತಂದೆ ಸಲ್ಲಿಸಿದ ಪರಿಷ್ಕರಣಾ ಅರ್ಜಿ ತಳ್ಳಿ ಹಾಕಿದ ಕೋರ್ಟ್
ನಿರ್ಭಯಾ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅಪರಾಧಿಯೊಬ್ಬರ ತಂದೆ ದೆಹಲಿ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಪರಿಷ್ಕರಣೆ ಅರ್ಜಿಯನ್ನ ನ್ಯಾಯಾಲಯ ತಳ್ಳಿ ಹಾಕಿದೆ.
ಸಾಂಧರ್ಬಿಕ ಚಿತ್ರ
ಅಪರಾಧಿ ತಂದೆ ಹೀರಾ ಲಾಲ್ ನಿರ್ಭಯ ಪ್ರಕರಣದ ಪ್ರತ್ಯಕ್ಷದರ್ಶಿ ವಿರುದ್ಧ ಈ ಹಿಂದೆ ಎಫ್ಐಆರ್ ದಾಖಲಿಸಿದ್ದರು. ಈ ಪ್ರಕರಣದ ಬಗ್ಗೆ ಆಕೆಯ ಸ್ನೇಹಿತ ಹಣ ಪಡೆದುಕೊಂಡು ವಿವಿಧ ಸುದ್ದಿ ವಾಹಿನಿಗಳಿಗೆ ಸಂದರ್ಶನ ನೀಡುತ್ತಿದ್ದಾನೆ ಎಂದು ಆರೋಪಿಸಿ ಪವನ್ ಗುಪ್ತಾ ತಂದೆ ಹೀರಾ ಲಾಲ್ ದೂರು ದಾಖಲಿಸಿದ್ದು, ಈ ದೂರನ್ನು ಜನವರಿ 6ರಂದು ನ್ಯಾಯಾಲಯ ವಜಾಗೊಳಿಸಿತ್ತು.
ಅತ್ಯಾಚಾರ ನಡೆದ ವೇಳೆ, ಸಂತ್ರಸ್ತೆಯ ಸ್ನೇಹಿತ ಹಾಗೂ ಏಕೈಕ ಪ್ರತ್ಯಕ್ಷದರ್ಶಿಗೂ ಅಪರಾಧಿ ಥಳಿಸಿ ಗಾಯಗೊಳಿಸಿದ್ದಲ್ಲದೇ ಬಸ್ನಿಂದ ಕೆಳಕ್ಕೆ ನೂಕಿದ್ದರು.
TAGGED:
FIR against sole witness