ಕರ್ನಾಟಕ

karnataka

ETV Bharat / bharat

ಭೀಮ್ ಆರ್ಮಿ ಮುಖ್ಯಸ್ಥನ ಜಾಮೀನು ಅರ್ಜಿ ವಜಾ: 14 ದಿನ ನ್ಯಾಯಾಂಗ ಬಂಧನ - ಚಂದ್ರಶೇಖರ್​ ಅಜಾದ್ ಜಾಮೀನು ಅರ್ಜಿ ತಿರಸ್ಕಾರ

ಭೀಮ್​ ಆರ್ಮಿ ಮುಖ್ಯಸ್ಥ ಚಂದ್ರಶೇಖರ್​ ಅಜಾದ್​ರ ಜಾಮೀನು ಅರ್ಜಿಯನ್ನ ದೆಹಲಿ ಕೋರ್ಟ್​ ತಿರಸ್ಕರಿಸಿ, 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಚಂದ್ರಶೇಖರ್​ ಅಜಾದ್ ಜಾಮೀನು ಅರ್ಜಿ ತಿರಸ್ಕಾರ, Delhi court dismisses Bhim Army chief's bail plea
ಚಂದ್ರಶೇಖರ್​ ಅಜಾದ್

By

Published : Dec 21, 2019, 10:38 PM IST

ನವದೆಹಲಿ:ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆ ನಡೆಸಿ ನವದೆಹಲಿ ಪೊಲೀಸರಿಂದ ಬಂಧಿಸಲ್ಪಟ್ಟಿರುವ ಭೀಮ್​ ಆರ್ಮಿ ಮುಖ್ಯಸ್ಥ ಚಂದ್ರಶೇಖರ್​ ಅಜಾದ್ ಅವರ​ ಜಾಮೀನು ಅರ್ಜಿಯನ್ನ ದೆಹಲಿ ಕೋರ್ಟ್​ ತಿರಸ್ಕರಿಸಿದೆ.

ಶುಕ್ರವಾರ ತಡರಾತ್ರಿ ಜಾಮಾ ಮಸೀದಿ ಬಳಿ ಸಿಎಎ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದ ಭೀಮ್​ ಆರ್ಮಿ ಮುಖ್ಯಸ್ಥ ಚಂದ್ರಶೇಖರ್​ ಅಜಾದ್​ರನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದರು. ದರಿಯಾ ಗಂಜ್ ಪ್ರದೇಶದಲ್ಲಿ ನಡೆದ ಪೌರತ್ವ ವಿರೋಧಿ ಪ್ರತಿಭಟನೆಗೆ ಸಂಬಂಧಿಸಿದಂತೆ ಗಲಭೆ, ಕಾನೂನುಬಾಹಿರ ಸಭೆ ಮತ್ತು ಇತರ ಅಪರಾಧಗಳ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.

ಬಳಿಕ ಚಂದ್ರಶೇಖರ್​ ಅಜಾದ್ ಅವರು ತೀಸ್​ ಹಜಾರಿ ಕೋರ್ಟ್​ನಲ್ಲಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಜಾಮೀನು ನೀಡಲು ನಿರಾಕರಿಸಿ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಸದ್ಯ ಚಂದ್ರಶೇಖರ್​ ಅಜಾದ್​ರನ್ನ ತಿಹಾರ್​ ಜೈಲಿನಲ್ಲಿ ಇರಿಸಲಾಗಿದೆ.

ಎಫ್‌ಐಆರ್‌ನಲ್ಲಿ ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಅಜಾದ್ ಪ್ರಾರ್ಥನೆ ವೇಳೆ ಜಮಾ ಮಸೀದಿಯ ಹೊರಗೆ ಸುಮಾರು 4,000 ಜನರ ಗುಂಪನ್ನು ಪ್ರಚೋದಿಸಿದ್ದಾರೆ ಎಂದು ಉಲ್ಲೇಖಿಸಲಾಗಿದೆ. ಅಲ್ಲದೆ ಇವರ ಭಾಷಣದ ನಂತರ ಜಾಮಾ ಮಸೀದಿ ಮತ್ತು ಇಂಡಿಯಾ ಗೇಟ್​ ಮಧ್ಯೆ ಸಾವಿರಾರು ಜನ ಜಮಾವಣೆಗೊಂಡರು ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

For All Latest Updates

ABOUT THE AUTHOR

...view details