ನವದೆಹಲಿ: ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧಿಗಳಿಗೆ ನಾಳೆಗೆ ನಿಗದಿಯಾಗಿದ್ದ ಗಲ್ಲು ಶಿಕ್ಷೆಯನ್ನು ದೆಹಲಿಯ ಪಟಿಯಾಲ ಹೌಸ್ ಕೋರ್ಟ್ ಮತ್ತೆ ಮುಂದೂಡಿದೆ.
ಬ್ರೇಕಿಂಗ್: ನಿರ್ಭಯಾ ಅಪರಾಧಿಗಳಿಗೆ ನಾಳೆಯೂ ಇಲ್ಲ ಗಲ್ಲು ಶಿಕ್ಷೆ ..! - ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣ
ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಮುಂದಿನ ಆದೇಶದವರೆಗೆ ಮರಣ ದಂಡನೆಯನ್ನು ತಡೆಹಿಡಿಯಲಾಗಿದೆ ಎಂದು ಇಂದು ದೆಹಲಿ ಕೋರ್ಟ್ ತಿಳಿಸಿದ್ದು, ಮಾರ್ಚ್ 3ಕ್ಕೆ ಫಿಕ್ಸ್ ಆಗಿದ್ದ ಗಲ್ಲು ಶಿಕ್ಷೆ ಮೂರನೇ ಬಾರಿಗೆ ಮುಂದೂಡಿಕೆಯಾದಂತಾಗಿದೆ.
ನಿರ್ಭಯಾ ಅಪರಾಧಿ
ಮುಂದಿನ ಆದೇಶದವರೆಗೆ ಮರಣ ದಂಡನೆಯನ್ನು ತಡೆಹಿಡಿಯಲಾಗಿದೆ ಎಂದು ಇಂದು ಕೋರ್ಟ್ ತಿಳಿಸಿದೆ. ಇದರಿಂದ ಗಲ್ಲು ಶಿಕ್ಷೆ ಸತತ ಮೂರನೇ ಬಾರಿಗೆ ಮುಂದೂಡಿಕೆಯಾದಂತಾಗಿದೆ.
ನಾಲ್ವರು ಅಪರಾಧಿಗಳಲ್ಲಿ ಒಬ್ಬನಾದ ಪವನ್ ಕುಮಾರ್ ಗುಪ್ತಾ ಸಲ್ಲಿಸಿದ್ದ ಕ್ಷಮಾದಾನ ಅರ್ಜಿ ರಾಷ್ಟ್ರಪತಿಗಳ ಮುಂದೆ ಬಾಕಿ ಇರುವುದರಿಂದ ಮರಣ ದಂಡನೆಯನ್ನು ಮುಂದೂಡಲಾಗಿದೆ ಎಂದು ಕೋರ್ಟ್ ತಿಳಿಸಿದೆ. ಗಲ್ಲು ಶಿಕ್ಷೆಗೆ ಕೇವಲ 12 ಗಂಟೆಗಳು ಬಾಕಿ ಇರುವಾಗ ಕೋರ್ಟ್ ಶಿಕ್ಷೆಯನ್ನು ಮುಂದೂಡಿದೆ.
Last Updated : Mar 2, 2020, 5:59 PM IST