ದೆಹಲಿ: ವಿಚಾರಣೆಗೆ ಹಾಜರಾಗಿ ವಾಪಸ್ ಆಗುತ್ತಿದ್ದ ವೇಳೆ ಮಹಿಳಾ ಕೈದಿ ಮೇಲೆ ಅತ್ಯಾಚಾರ ನಡೆಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಆಗಸ್ಟ್ 3ರಂದು ತಿಹಾರ್ ಜೈಲಿನ ಕೈದಿಯಾಗಿದ್ದ 42 ವರ್ಷದ ಮಹಿಳೆಯನ್ನು ಇಬ್ಬರು ಮಹಿಳಾ ಪೇದೆ ಮತ್ತು ಪೊಲೀಸ್ ಪೇದೆಯೊಬ್ಬರು ವಿಚಾರಣೆಗೆ ಎಂದು ಪಶ್ಚಿಮ ಬಂಗಾಳದ ಮುರ್ಷಿದಾಬಾದ್ನ ಕೋರ್ಟ್ಗೆ ಕರೆದೊಯ್ದಿದ್ದರು.
ಕೋರ್ಟ್ಗೆ ಹಾಜರು ಪಡಿಸಿ ರೈಲಿನಲ್ಲಿ ವಾಪಸ್ ಆಗುತ್ತಿದ್ದ ವೇಳೆ ಮಹಿಳಾ ಕೈದಿ ಮೂತ್ರ ವಿಸರ್ಜನೆಗಂದು ಬಾತ್ರೂಂಗೆ ತೆರಳಿದ್ದಾರೆ. ಈ ವೇಳೆ ಇಬ್ಬರು ಮಹಿಳಾ ಪೇದೆ ಆಕೆಯೊಂದಿಗೆ ಹೋಗಿದ್ದರು. ಆದ್ರೆ ಪೊಲೀಸ್ ಪೇದೆ ಇಬ್ಬರು ಮಹಿಳಾ ಪೇದೆಗಳನ್ನ ಹಿಂದಕ್ಕೆ ಕಳುಹಿಸಿ ಬಾತ್ರೂಂಗೆ ನುಗ್ಗಿದ್ದಾನೆ. ಚಲಿಸುತ್ತಿದ್ದ ರೈಲಿನಲ್ಲೇ ಮಹಿಳಾ ಕೈದಿ ಮೇಲೆ ಅತ್ಯಾಚಾರ ಎಸಗಿ ಯಾರಿಗೂ ಹೇಳದಂತೆ ಜೀವ ಬೆದರಿಕೆಯೊಡ್ಡಿದ್ದಾನೆ.
ಮಹಿಳಾ ಕೈದಿಯನ್ನು ತಿಹಾರ್ ಜೈಲಿಗೆ ಕರೆತಂದಿದ್ದಾರೆ. ಈ ವೇಳೆ ಮಹಿಳೆ, ರೈಲಿನಲ್ಲಿ ನಡೆದ ಘಟನೆಯನ್ನು ಹಿರಿಯ ಅಧಿಕಾರಿಗಳು ಮುಂದೆ ಹೇಳಿದ್ದಾರೆ. ಹಿರಿಯ ಅಧಿಕಾರಿಗಳು ಮಹಿಳಾ ಕೈದಿಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಿ, ಪೊಲೀಸ್ ಪೇದೆಯನ್ನು ವಶಕ್ಕೆ ಪಡೆದು ಮುಂದಿನ ಕ್ರಮಕೈಗೊಂಡಿದ್ದಾರೆ.