ದೆಹಲಿ: ವಿಶ್ವ ಪ್ರಸಿದ್ಧ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಪಡೆಯಬೇಕೆಂಬುದು ಪ್ರತಿಯೊಬ್ಬರ ಕನಸು. ಆದರೆ, ನಾನಾ ಕಾರಣಗಳಿಂದ ಆ ಕನಸು ಈಡೇರುವುದಿಲ್ಲ. ಕೆಲವೊಮ್ಮೆ, ಈ ಕನಸುಗಳು ಕೆಲವು ಉನ್ನತ ದರ್ಜೆಯ ವಿಶ್ವವಿದ್ಯಾಲಯಗಳ ಆಯ್ಕೆ ಮಟ್ಟದಲ್ಲಿ ಹಾಳಾಗುತ್ತವೆ. ಆದರೆ, ಭಾರತೀಯ ವಿದ್ಯಾರ್ಥಿಯೊಬ್ಬ 10 ಕ್ಕೂ ಹೆಚ್ಚು ಯುನಿವರ್ಸಿಟಿಗಳಲ್ಲಿ ಇಂಟರ್ನ್ಶಿಪ್ಗೆ ಆಫರ್ ಪಡೆದಿದ್ದಾರೆ.
ದೆಹಲಿ ಮೂಲದ ಅಭಿಷೇಕ್ ಅಗ್ರಹಾರಿ ಎಂಬ ಇಂಜಿನಿಯರಿಂಗ್ ವಿದ್ಯಾರ್ಥಿಗೆ, ಯುಕೆ ಯುನಿವರ್ಸಿಟಿ ಆಫ್ ಆಕ್ಸ್ಫರ್ಡ್ ಮತ್ತು ಅಮೆರಿಕದ ಪೆನ್ಸಿಲ್ವೇನಿಯಾ ಸ್ಟೇಟ್ ಯೂನಿವರ್ಸಿಟಿ ಮತ್ತು ಇಲಿನಾಯ್ಸ್ ವಿವಿ ಇಂಟರ್ನ್ಶಿಪ್ ಮಾಡಲು ಅವಕಾಶ ಕಲ್ಪಿಸಿವೆ.
ನನ್ನ ಕಠಿಣ ಪರಿಶ್ರಮ ಫಲ ನೀಡಿದ್ದು, ನನಗೆ ವಿಶ್ವದ ಅನೇಕ ವಿವಿಗಳು ಇಂಟರ್ನ್ಶಿಪ್ ಮಾಡಲು ಅವಕಾಶ ಮಾಡಿಕೊಟ್ಟಿವೆ. ಹಳೆಯ ಸಂಶೋಧನೆಗಳನ್ನು ಅನುಸರಿಸುವುದಕ್ಕೆ ನನಗೆ ಇಷ್ಟವಿಲ್ಲ. ಅದಕ್ಕೆ ನಾನು ನಿತ್ಯ ಹೊಸದನ್ನು ಅನ್ವೇಷಿಸಲು ಬಯಸುತ್ತೇನೆ ಎಂದು ಅಗ್ರಹಾರಿ ಹೇಳಿದರು.