ಕರ್ನಾಟಕ

karnataka

ETV Bharat / bharat

ಹ್ಯಾಟ್ರಿಕ್​​​​​​​ ಬಾರಿಸಿದ ಅರವಿಂದ್​ ಕೇಜ್ರಿವಾಲ್​:  ರಾಷ್ಟ್ರ ರಾಜಧಾನಿಯಲ್ಲೇ ’ಮೋದಿ-ಶಾ’ ಹಿಟ್​ ವಿಕೆಟ್​​!

ದೆಹಲಿ ವಿಧಾನಸಭೆ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಇಂದು ಬೆಳಗ್ಗೆ 8 ಗಂಟೆಯಿಂದ ಆರಂಭವಾಗಿದ್ದು, 21 ಕೇಂದ್ರಗಳಲ್ಲಿ ಮತ ಎಣಿಕೆ ನಡೆಯುತ್ತಿದೆ. ಆಪ್​ ಪಕ್ಷ ಭರ್ಜರಿ ಮುನ್ನಡೆ ಪಡೆದುಕೊಂಡು ಮೂರನೇ ಬಾರಿಗೆ ಅಧಿಕಾರದ ಗದ್ದುಗೆ ಏರುತ್ತಲಿದೆ.ಟ

Delhi Assembly polls Counting
ದೆಹಲಿ ಗದ್ದುಗೆ ಗುದ್ದಾಟದಲ್ಲಿ ಆಪ್​ಗೆ ಭಾರಿ ಮುನ್ನಡೆ: ಮುಂದುವರಿದ ಮತ ಎಣಿಕೆ

By

Published : Feb 11, 2020, 5:03 AM IST

Updated : Feb 11, 2020, 11:45 AM IST

ನವದೆಹಲಿ:ದೆಹಲಿ ವಿಧಾನಸಭೆ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಆರಂಭವಾಗಿದ್ದು, ನಗರದ 21 ಕೇಂದ್ರಗಳಲ್ಲಿ ಮತ ಎಣಿಕೆ ನಡೆಯುತ್ತಿದೆ. ಆರಂಭಿಕ ಮಾಹಿತಿ ಪ್ರಕಾರ ದೆಹಲಿ ಚುನಾವಣೆಯಲ್ಲಿ ಆಮ್​ ಆದ್ಮಿ ಪಕ್ಷ ಆರಂಭಿಕ ಮುನ್ನಡೆ ಪಡೆದುಕೊಂಡಿದೆ. 70 ವಿಧಾನಸಭೆ ಕ್ಷೇತ್ರಗಳಲ್ಲಿ ಪಕ್ಷವೊಂದು ಅಧಿಕಾರ ಹಿಡಿಯಲು 36 ಸ್ಥಾನಗಳನ್ನು ಗೆಲ್ಲಬೇಕಿದೆ. ಅರವಿಂದ್​ ಕೇಜ್ರಿವಾಲ್​ ಅವರ ಆಮ್​ ಆದ್ಮಿ ಪಕ್ಷ ಕಳೆದ ಬಾರಿ ಭಾರಿ ಬಹುಮತದಿಂದ ಅಧಿಕಾರದ ಚುಕ್ಕಾಣಿ ಹಿಡಿದಿತ್ತು. ಈ ಬಾರಿಯೂ ಆ ಪಕ್ಷ ಅದೇ ಹಾದಿಯಲ್ಲಿದೆ.

Delhi Assembly polls Counting

70 ಕ್ಷೇತ್ರಗಳ ಫಲಿತಾಂಶ ಲಭ್ಯವಿದ್ದು ಇದರಲ್ಲಿ 53 ಕ್ಷೇತ್ರಗಳಲ್ಲಿ ಆಮ್​ ಆದ್ಮಿ ಪಕ್ಷ ಮುನ್ನಡೆ ಪಡೆದರೆ, ಬಿಜೆಪಿ ಕೇವಲ 17 ಸ್ಥಾನಗಳಲ್ಲಿ ಮುನ್ನಡೆ ಪಡೆದುಕೊಂಡಿದೆ.

ಇತ್ತೀಚಿನ ವರದಿ ಪ್ರಕಾರ ಆಪ್​ 22 ಕ್ಷೇತ್ರಗಳಲ್ಲಿ ಮುನ್ನಡೆ ಗಳಿಸಿದ್ದರೆ, ಬಿಜೆಪಿ ಕೇವಲ 9ಸ್ಥಾನಗಳಲ್ಲಿ ಮುನ್ನಡೆ ಪಡೆದಿದೆ. ಕ್ಷಣಕ್ಷಣಕ್ಕೂ ಈ ಫಲಿತಾಂಶ ಬದಲಾವಣೆ ಕಾಣಲಿದೆ. ಶನಿವಾರ ನಡೆದ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಶೇ. 62.59 ಮತದಾನ ಪ್ರಮಾಣ ದಾಖಲಾಗಿತ್ತು. 2015ರಲ್ಲಿ ನಡೆದ ವಿಧಾನಸಭೆ ಚುನಾವಣೆಗೆ ಹೋಲಿಕೆ ಮಾಡಿದರೆ ಈ ಬಾರಿ ಶೇ.5 ರಷ್ಟು ಕಡಿಮೆ ದಾಖಲಾಗಿದೆ. ಬಲ್ಲಿಮರನ್ ವಿಧಾನಸಭಾ ಕ್ಷೇತ್ರದಲ್ಲಿ ಶೇ. 71.6 ರಷ್ಟು ಅತಿ ಹೆಚ್ಚು ಮತದಾನದ ಪ್ರಮಾಣ ದಾಖಲಾಗಿದ್ದರೆ, ದೆಹಲಿ ಕಂಟೋನ್ಮೆಂಟ್‌ನಲ್ಲಿ ಶೇ. 45.4 ರಷ್ಟು ಅತಿ ಕಡಿಮೆ ಮತದಾನ ಪ್ರಮಾಣ ದಾಖಲಾಗಿದೆ.

ದೆಹಲಿ ಗದ್ದುಗೆ ಗುದ್ದಾಟದಲ್ಲಿ ಆಪ್​ಗೆ ಭಾರಿ ಮುನ್ನಡೆ: ಮುಂದುವರಿದ ಮತ ಎಣಿಕೆ

ಚುನಾವಣೋತ್ತರ ಸಮೀಕ್ಷೆಗಳು ಮತ್ತೆ ಆಮ್​ ಆದ್ಮಿ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ತಿಳಿಸಿದ್ದು, ಇತ್ತ ಬಿಜೆಪಿಯು, ಸಿಎಎ ವಿರೋಧಿ ಪ್ರತಿಭಟನೆ ಹಾಗೂ ರಾಷ್ಟ್ರೀಯತೆಯನ್ನು ಕೇಂದ್ರವಾಗಿಟ್ಟುಕೊಂಡು ಅಬ್ಬರದ ಪ್ರಚಾರ ನಡೆಸಿತ್ತು.

ದೆಹಲಿ ಗದ್ದುಗೆ ಗುದ್ದಾಟದಲ್ಲಿ ಆಪ್​ಗೆ ಭಾರಿ ಮುನ್ನಡೆ: ಮುಂದುವರಿದ ಮತ ಎಣಿಕೆ
Last Updated : Feb 11, 2020, 11:45 AM IST

ABOUT THE AUTHOR

...view details