ಕರ್ನಾಟಕ

karnataka

ಶೀಘ್ರದಲ್ಲೇ ಜಮ್ಮು ಮತ್ತು ಕಾಶ್ಮೀರಕ್ಕೆ 15 - 20 ದೇಶಗಳ ರಾಯಭಾರಿಗಳ ನಿಯೋಗ ಭೇಟಿ?

ಭಾರತಕ್ಕೆ ಶೀಘ್ರದಲ್ಲೇ ಆಗಮಿಸಲಿರುವ ಸುಮಾರು 15 ರಿಂದ 20 ರಾಯಭಾರಿಗಳನ್ನು, ಕಾಶ್ಮೀರ ಕಣಿವೆಗೆ ಕರೆದೊಯ್ಯಲಾಗುವುದು. ಅಲ್ಲಿ ರಾಜ್ಯದಲ್ಲಿ ಉಗ್ರಗಾಮಿತ್ವವನ್ನು ಹರಡುವಲ್ಲಿ ಪಾಕಿಸ್ತಾನದ ಒಳಗೊಳ್ಳುವಿಕೆ ಬಗ್ಗೆ ಭದ್ರತಾ ಸಂಸ್ಥೆಗಳಿಂದ ಅವರಿಗೆ ಮಾಹಿತಿ ಕೊಡಲಾಗುವುದೆಂದು ಅಧಿಕಾರಿಗಳು ತಿಳಿಸಿದ್ದಾರೆ.

By

Published : Jan 8, 2020, 7:57 AM IST

Published : Jan 8, 2020, 7:57 AM IST

Updated : Jan 8, 2020, 9:49 AM IST

Delegation of envoys to India to visit JK soon
15-20 ದೇಶಗಳ ರಾಯಭಾರಿಗಳ ನಿಯೋಗವು ಶೀಘ್ರದಲ್ಲೇ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ

ನವದೆಹಲಿ:15-20 ದೇಶಗಳ ರಾಯಭಾರಿಗಳ ನಿಯೋಗವು ಶೀಘ್ರದಲ್ಲೇ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಲಿದ್ದು, ಭದ್ರತೆ ಕುರಿತಾಗಿ ಮಾಹಿತಿ ನೀಡಲಾಗುವುದು ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.

ಸುಮಾರು 15 ರಿಂದ 20 ರಾಯಭಾರಿಗಳನ್ನು ಈ ವಾರದ ಬಳಿಕ ಕಾಶ್ಮೀರ ಕಣಿವೆಗೆ ಕರೆದೊಯ್ಯಲಾಗುವುದು. ಅಲ್ಲಿ ರಾಜ್ಯದಲ್ಲಿ ಉಗ್ರಗಾಮಿತ್ವವನ್ನು ಹರಡುವಲ್ಲಿ ಪಾಕಿಸ್ತಾನದ ಪಾತ್ರದ ಬಗ್ಗೆ ಭದ್ರತಾ ಸಂಸ್ಥೆಗಳಿಂದ ಅವರಿಗೆ ತಿಳಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಂದೇ ಅವರನ್ನು ಜಮ್ಮುವಿಗೆ ಕರೆದೊಯ್ದು ಲೆಫ್ಟಿನೆಂಟ್ ಗವರ್ನರ್ ಜಿ ಸಿ ಮುರ್ಮು ಮತ್ತು ಇತರ ಅಧಿಕಾರಿಗಳನ್ನು ಭೇಟಿಗೆ ಅವಕಾಶ ಮಾಡಿಸಿಕೊಡಲಾಗುವುದು.

ಮಾಹಿತಿ ಮೂಲಗಳ ಪ್ರಕಾರ, 370 ವಿಧಿಯ ನಿಬಂಧನೆಗಳನ್ನು ರದ್ದುಪಡಿಸಿದ ಬಳಿಕ ಕಣಿವೆಯ ಪರಿಸ್ಥಿತಿ ಬಗ್ಗೆ ಮೊದಲ ಮಾಹಿತಿ ಪಡೆಯಲು ಕೆಲವು ದೇಶಗಳ ರಾಯಭಾರಿಗಳು ಕಾಶ್ಮೀರಕ್ಕೆ ಭೇಟಿ ನೀಡುವಂತೆ ಸರ್ಕಾರವನ್ನು ಕೋರಿದ್ದಾರೆ.

ಕಾಶ್ಮೀರಕ್ಕೆ ಕರೆದೊಯ್ಯುವ ರಾಯಭಾರಿಗಳು ಯುರೋಪ್, ಆಫ್ರಿಕಾ, ಮಧ್ಯ ಏಷ್ಯಾ, ಲ್ಯಾಟಿನ್ ಅಮೆರಿಕ ಮತ್ತು ಮಧ್ಯಪ್ರಾಚ್ಯ ಸೇರಿದಂತೆ ವಿವಿಧ ಪ್ರಮುಖ ಪ್ರದೇಶಗಳನ್ನು ಪ್ರತಿನಿಧಿಸುವ ನಿರೀಕ್ಷೆಯಿದ್ದು, ಇದು ಕಾಶ್ಮೀರ ವಿಷಯದಲ್ಲಿ ಪಾಕಿಸ್ತಾನದ ವಿರುದ್ಧದ ಅಪಪ್ರಚಾರವನ್ನು ಖಂಡಿಸುವ ಭಾರತದ ರಾಜತಾಂತ್ರಿಕ ಪ್ರಭಾವದ ಭಾಗವಾಗಲಿದೆ.

ಕಳೆದ ವರ್ಷ ಆಗಸ್ಟ್ 5 ರಂದು ಭಾರತವು ಜಮ್ಮು- ಕಾಶ್ಮೀರವನ್ನು ಮರು ಸಂಘಟಿಸುವ ನಿರ್ಧಾರವನ್ನು ಘೋಷಿಸಿದ ನಂತರ, ಪಾಕಿಸ್ತಾನ ಪ್ರತಿಕ್ರಿಯಿಸಿದ್ದಲ್ಲದೇ, ಈ ವಿಷಯದ ಕುರಿತು ನವದೆಹಲಿ ವಿರುದ್ಧ ಪ್ರಮುಖ ರಾಜತಾಂತ್ರಿಕ ಆಕ್ರಮಣವನ್ನು ಮಾಡಿತು. ಪಾಕಿಸ್ತಾನವು ಭಾರತೀಯ ರಾಯಭಾರಿಯನ್ನು ಹೊರಹಾಕುವ ಮೂಲಕ ರಾಜತಾಂತ್ರಿಕ ಸಂಬಂಧಗಳನ್ನು ಕೆಳಮಟ್ಟಕ್ಕಿಳಿಸಿದೆ.

ಇನ್ನೂ 370 ವಿಧಿಯ ನಿಬಂಧನೆಗಳನ್ನು ರದ್ದುಪಡಿಸಿದ ಬಳಿಕ, ಕಾಶ್ಮೀರಕ್ಕೆ ಇದು ವಿದೇಶಿ ನಿಯೋಗದ ಎರಡನೇ ಭೇಟಿಯಾಗಿದೆ.

Last Updated : Jan 8, 2020, 9:49 AM IST

ABOUT THE AUTHOR

...view details