ಕರ್ನಾಟಕ

karnataka

ETV Bharat / bharat

ಕಳ್ಳನಿಗೆ ವಕೀಲನಾಗಲು ಸಹಾಯಹಸ್ತ ಚಾಚಿದ ಡೆಹ್ರಾಡೂನ್​​ ಪೊಲೀಸರು! - ಡೆಹ್ರಾಡೂನ್

ದ್ವಿತೀಯ ಪಿಯುಸಿ ವಿದ್ಯಾರ್ಥಿ ಅರ್ಚಿತ್​ ಕಳ್ಳತನ ಪ್ರಕರಣಡಿ ಬಂಧಿತನಾಗಿ ಒಂದು ವರ್ಷ ಜೈಲು ಶಿಕ್ಷೆಗೆ ಒಳಪಟ್ಟಿದ್ದ. ನ್ಯಾಯಾಲಯದ ಆದೇಶದ ನಂತರ ಆರು ತಿಂಗಳ ಕಾಲ ಪೆರೋಲ್​​ನಲ್ಲಿ ಹೊರ ಬಂದ 700 ಕೈದಿಗಳ ಪೈಕಿ ಅರ್ಚಿತ್​ ಕೂಡ ಒಬ್ಬನಾಗಿದ್ದ.

Dehradun police helps thief to become lawyer
ವಕೀಲನಾಗಲು ಸಹಾಯ ಹಸ್ತ ಚಾಚಿದ ಡೆಹ್ರಾಡೂನ್ ಪೊಲೀಸರು

By

Published : Sep 11, 2020, 7:44 AM IST

ಡೆಹ್ರಾಡೂನ್: ಜೈಲಿನಿಂದ ಬಿಡುಗಡೆಯಾದ ಕಳ್ಳ(ಮಾಜಿ ಕಳ್ಳ)ನಿಗೆ ಡೆಹ್ರಾಡೂನ್ ಪೊಲೀಸರು ವಿದ್ಯಾಭ್ಯಾಸ ಮಾಡಲು ಸಹಕರಿಸುತ್ತಿದ್ದಾರೆ.

ದ್ವಿತೀಯ ಪಿಯುಸಿ ವಿದ್ಯಾರ್ಥಿ ಅರ್ಚಿತ್​ ಕಳ್ಳತನ ಪ್ರಕರಣಡಿ ಬಂಧಿತನಾಗಿ ಒಂದು ವರ್ಷ ಜೈಲು ಶಿಕ್ಷೆಗೆ ಒಳಪಟ್ಟಿದ್ದ. ನ್ಯಾಯಾಲಯದ ಆದೇಶದ ನಂತರ ಆರು ತಿಂಗಳ ಕಾಲ ಪೆರೋಲ್​​ನಲ್ಲಿ ಹೊರ ಬಂದ 700 ಕೈದಿಗಳ ಪೈಕಿ ಅರ್ಚಿತ್​ ಕೂಡ ಒಬ್ಬನಾಗಿದ್ದ.

ವಿದ್ಯಾರ್ಥಿಗೆ ವಕೀಲನಾಗಲು ಸಹಾಯ ಹಸ್ತ ಚಾಚಿದ ಡೆಹ್ರಾಡೂನ್ ಪೊಲೀಸರು

ಅರ್ಚಿತ್​ ಮನೆಗೆ ಹಿಂದಿರುಗಿದಾಗ ಆತನ ಕುಟುಂಬಸ್ಥರು ಆತನನ್ನು ಮನೆಗೆ ಕರೆದುಕೊಳ್ಳಲು ನಿರಾಕರಿಸಿದ್ದರು. ಬಳಿಕ ಅರ್ಚಿತ್​ ರಾಯ್​​ಪುರ್​​ ಪೊಲೀಸ್​​ ಠಾಣೆಗೆ ಬಂದಿದ್ದು, ಠಾಣೆಯ ಇನ್​​ಚಾರ್ಜ್​​​ ಆತನಿಗೆ ನೆಲೆಸಲು ವ್ಯವಸ್ಥೆ ಕಲ್ಪಿಸಿದರೆಂದು ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೆ, ಈತ ಲಾಕ್​​ಡೌನ್​​ ಸಂದರ್ಭದಲ್ಲಿ ಪೊಲೀಸ್​ ಅಧಿಕಾರಿಗಳೊಂದಿಗೆ ಸೇರಿ ಜನರಿಗೆ ಪಡಿತರ ಮತ್ತು ಅಗತ್ಯ ವಸ್ತುಗಳನ್ನು ವಿತರಿಸುವ ಕಾರ್ಯದಲ್ಲಿ ಸಕ್ರಿಯವಾಗಿ ಪಾಲ್ಗೊಂಡನೆಂದು ತಿಳಿಸಿದರು.

ಈತನ ಬದಲಾದ ನಡವಳಿಕೆಯನ್ನು ಗಮನಿಸಿ ಈತನ ಜೈಲು ಶಿಕ್ಷೆಯನ್ನು ಹಿಂತೆಗೆದುಕೊಳ್ಳಲಾಯಿತು. ಪೊಲೀಸ್​​ ಸಿಬ್ಬಂದಿ ಸದ್ಯ ಈತನಿಗೆ ವಕೀಲ ವೃತ್ತಿ ವಿದ್ಯಾಭ್ಯಾಸ ಮಾಡಲು ಸಹಾಯ ಹಸ್ತ ಚಾಚಿದ್ದಾರೆ.

ಹಿನ್ನೆಲೆ:ಅರ್ಚಿತ್​ ಡೆಹ್ರಾಡೂನ್​ನಲ್ಲಿರುವ ತನ್ನ ಚಿಕ್ಕಮ್ಮನ ಮನೆಯಲ್ಲಿ ವಾಸಿಸುತ್ತಿದ್ದ. ಈತ ಮಾದಕ ವ್ಯಸನಿಯಾಗಿದ್ದು, ಡ್ರಗ್ಸ್​​ಗಾಗಿ ಹಣ ಇಲ್ಲದ ಸಂದರ್ಭದಲ್ಲಿ ಕಳ್ಳತನ ಮಾಡಿ ಬಂಧಿತನಾಗಿದ್ದ.

ABOUT THE AUTHOR

...view details