ಪ್ಯಾರಿಸ್(ಫ್ರಾನ್ಸ್): ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮೂರು ದಿನಗಳ ಫ್ರಾನ್ಸ್ ಪ್ರವಾಸ ಕೈಗೊಂಡಿದ್ದಾರೆ.
ಸಚಿವ ರಾಜನಾಥ್ ಸಿಂಗ್ ವಾರ್ಷಿಕ ರಕ್ಷಣಾ ಮಾತುಕತೆ ಹಾಗೂ ರಫೇಲ್ ಯುದ್ಧ ವಿಮಾನ ಹಸ್ತಾಂತರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಇಂದು ಅವರು ಅಲ್ಲಿಂದಲೇ ವಿಜಯ ದಶಮಿ ಹಾಗೂ ಆಯುಧ ಪೂಜೆಯನ್ನು ನೆರವೇರಿಸಲಿದ್ದಾರೆ. ಈ ಮೂಲಕ ಅವರು ಪ್ರತೀ ವರ್ಷ ಆಚರಣೆ ಮಾಡುತ್ತಿದ್ದಂತೆ ಈ ಬಾರಿ ಫ್ರಾನ್ಸ್ನಿಂದಲೇ ಆಯುಧ ಪೂಜೆ ಪೂರೈಸಲಿದ್ದಾರೆ.