ಕರ್ನಾಟಕ

karnataka

ETV Bharat / bharat

ಎ-ಸ್ಯಾಟ್ ಕ್ಷಿಪಣಿ ಮಾದರಿ ಅನಾವರಣಗೊಳಿಸಿದ ರಕ್ಷಣಾ ಮಂತ್ರಿ ರಾಜನಾಥ್ ಸಿಂಗ್​

ರಕ್ಷಣಾ ಮಂತ್ರಿ ರಾಜನಾಥ್ ಸಿಂಗ್ ಅವರು ಇಂದು ಡಿಆರ್‌ಡಿಓ ಭವನವಿರುವ ಆವರಣದಲ್ಲಿ ಅಳವಡಿಸಲಾಗಿರುವ ಆ್ಯಂಟಿ ಸ್ಯಾಟಲೈಟ್ (ಎ-ಸ್ಯಾಟ್) ಕ್ಷಿಪಣಿಯನ್ನು ಅನಾವರಣಗೊಳಿಸಿದರು. ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ, ಡಿಡಿಆರ್ ಮತ್ತು ಡಿ ಕಾರ್ಯದರ್ಶಿ ಮತ್ತು ಡಿಆರ್‌ಡಿಓ ಅಧ್ಯಕ್ಷ ಡಾ. ಜಿ. ಸತೀಶ್ ರೆಡ್ಡಿ ಉಪಸ್ಥಿತರಿದ್ದರು.

By

Published : Nov 9, 2020, 8:31 PM IST

Defense Minister Rajnath Singh unveils A-Sat missile model
ಎ-ಸ್ಯಾಟ್ ಕ್ಷಿಪಣಿ ಮಾದರಿಯನ್ನು ಅನಾವರಣಗೊಳಿಸಿದ ರಕ್ಷಣಾ ಮಂತ್ರಿ ರಾಜನಾಥ್ ಸಿಂಗ್​

ನವದೆಹಲಿ:ಡಿಆರ್‌ಡಿಓ ಭವನವಿರುವ ಆವರಣದಲ್ಲಿ ಅಳವಡಿಸಲಾಗಿರುವ ಆ್ಯಂಟಿ ಸ್ಯಾಟಲೈಟ್ (ಎ-ಸ್ಯಾಟ್) ಕ್ಷಿಪಣಿಯನ್ನು ರಕ್ಷಣಾ ಮಂತ್ರಿ ರಾಜನಾಥ್ ಸಿಂಗ್ ಅವರು ಇಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ, ಡಿಡಿಆರ್ ಮತ್ತು ಡಿ ಕಾರ್ಯದರ್ಶಿ ಮತ್ತು ಡಿಆರ್‌ಡಿಓ ಅಧ್ಯಕ್ಷ ಡಾ. ಜಿ. ಸತೀಶ್ ರೆಡ್ಡಿ ಅವರ ಉಪಸ್ಥಿತಿಯಲ್ಲಿ ಇಂದು ಅನಾವರಣಗೊಳಿಸಿದರು.

'ಮಿಷನ್ ಶಕ್ತಿ', ಇದು ದೇಶದ ಮೊದಲ ಉಪಗ್ರಹ ವಿರೋಧಿ (ಎಎಸ್ಎಟಿ) ಕ್ಷಿಪಣಿ ಪರೀಕ್ಷೆಯಾಗಿದ್ದು, ಮಾರ್ಚ್ 27, 2019 ರಂದು ಒಡಿಶಾದ ಡಾ. ಎಪಿಜೆ ಅಬ್ದುಲ್ ಕಲಾಂ ದ್ವೀಪದಿಂದ ಯಶಸ್ವಿಯಾಗಿ ನಡೆಸಲಾಯಿತು. ಅಲ್ಲಿ ಲೋ ಅರ್ಥ್ ಕಕ್ಷೆಯಲ್ಲಿ (ಎಲ್‌ಇಒ) ವೇಗವಾಗಿ ಚಲಿಸುವ ಭಾರತೀಯ ಪರಿಭ್ರಮಿಸುವ ಗುರಿ ಉಪಗ್ರಹವನ್ನು ಪಿನ್​ ಪಾಯಿಂಟ್ ನಿಖರತೆಯೊಂದಿಗೆ ತಟಸ್ಥಗೊಳಿಸಲಾಯಿತು. ಇದು ಅತ್ಯಂತ ಸಂಕೀರ್ಣವಾದ ಕಾರ್ಯಾಚರಣೆಯಾಗಿದ್ದು, ಗಮನಾರ್ಹವಾದ ನಿಖರತೆಯೊಂದಿಗೆ ಅತಿ ವೇಗದಲ್ಲಿ ನಡೆಸಲಾಯಿತು.

'ಮಿಷನ್ ಶಕ್ತಿ'ಯ ಯಶಸ್ವಿ ನಡೆಯು ಭಾರತವನ್ನು ಬಾಹ್ಯಾಕಾಶದಲ್ಲಿ ತನ್ನ ಸ್ವತ್ತುಗಳನ್ನು ರಕ್ಷಿಸಿಕೊಳ್ಳುವ ಸಾಮರ್ಥ್ಯವನ್ನು ಹೊಂದಿರುವ ವಿಶ್ವದ ನಾಲ್ಕನೇ ರಾಷ್ಟ್ರವನ್ನಾಗಿ ಮಾಡಿತು.

ಈ ಸಂದರ್ಭದಲ್ಲಿ ರಕ್ಷಣಾ ಮಂತ್ರಿ ರಾಜನಾಥ್ ಸಿಂಗ್ ಅವರು ವಿಜ್ಞಾನಿಗಳ ತಂಡದ ನವೀನ ಸಾಧನೆಯನ್ನು ಶ್ಲಾಘಿಸಿದರು.

ಡಿಡಿಆರ್ ಮತ್ತು ಡಿ ಕಾರ್ಯದರ್ಶಿ, ಡಿಆರ್‌ಡಿಓ ಅಧ್ಯಕ್ಷ ಡಾ. ಜಿ. ಸತೀಶ್ ರೆಡ್ಡಿ ಮಾತನಾಡಿ, ಎ-ಸ್ಯಾಟ್ ಮಾದರಿಯನ್ನು ಸ್ಥಾಪಿಸುವುದರಿಂದ ಭವಿಷ್ಯದಲ್ಲಿ ಇಂತಹ ಹಲವು ಸವಾಲಿನ ಕಾರ್ಯಗಳನ್ನು ಕೈಗೊಳ್ಳಲು ಡಿಆರ್‌ಡಿಓ ಪ್ರೇರಣೆ ನೀಡುತ್ತದೆ ಎಂದು ಹೇಳಿದರು.

ಈ ವೇಳೆ ನಿತಿನ್ ಗಡ್ಕರಿ, ತಂತ್ರಜ್ಞಾನದ ಬಗ್ಗೆ ತೃಪ್ತಿ ವ್ಯಕ್ತಪಡಿಸಿದರು ಮತ್ತು ಅದನ್ನು ಯಶಸ್ವಿಯಾಗಿ ಮುಂದೆ ಕೊಂಡೊಯ್ಯುವಂತೆ ಹಾರೈಸಿದರು.

ABOUT THE AUTHOR

...view details