ನವದೆಹಲಿ:ಕೇಂದ್ರ ರಕ್ಷಣಾ ಕಾರ್ಯದರ್ಶಿ ಅಜಯ್ ಕುಮಾರ್ಗೂ ಕೊರೊನಾ ವೈರಸ್ ತಗುಲಿದೆ ಎಂಬ ವರದಿ ಲಭ್ಯವಾಗಿದ್ದು, ಕಳೆದ ನಾಲ್ಕು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿರುವ ಅವರು ಹೋಂ ಕ್ವಾರಂಟೈನ್ನಲ್ಲಿದ್ದಾರೆ ಎಂದು ತಿಳಿದು ಬಂದಿದೆ.
ಅಜಯ್ ಕುಮಾರ್ ವರದಿ ನೆಗೆಟಿವ್ ಬರುವವರೆಗೆ ಹೋಂ ಕ್ವಾರಂಟೈನ್ನಲ್ಲಿ ಇರಲಿದ್ದಾರೆ ಎಂದು ಅವರ ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ. ಸದ್ಯ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿಸಿದ್ದಾರೆ. ಆದರೆ ಇದರ ಬಗ್ಗೆ ಮಾಹಿತಿ ನೀಡಿಲು ಕೇಂದ್ರ ರಕ್ಷಣಾ ಸಚಿವರ ವಕ್ತಾರ ಹಿಂದೇಟು ಹಾಕಿದ್ದಾರೆ.