ಜಮ್ಮು ಮತ್ತು ಕಾಶ್ಮೀರ:ಮೋದಿ ಸರ್ಕಾರದಲ್ಲಿ ರಕ್ಷಣಾ ಸಚಿವರಾಗಿ ಅಧಿಕಾರಿ ಸ್ವೀಕರಿಸಿರುವ ರಾಜನಾಥ್ ಸಿಂಗ್ ವಿಶ್ವದ ಅತೀ ಎತ್ತರದ ಯುದ್ಧಭೂಮಿ ಸಿಯಾಚಿನ್ಗೆ ಭೇಟಿ ನೀಡಿದ್ದಾರೆ.
ವಿಶ್ವದ ಅತೀ ಎತ್ತರದ ಯುದ್ಧಭೂಮಿ ಸಿಯಾಚಿನ್ಗೆ ರಾಜನಾಥ್ ಸಿಂಗ್ ಭೇಟಿ.. - undefined
ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರೊಂದಿಗೆ ಸಿಯಾಚಿನ್ ಬೇಸ್ ಕ್ಯಾಂಪ್ಗೆ ನೂತನ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭೇಟಿ ನೀಡಿದ್ದಾರೆ.
ಸಿಯಾಚಿನ್ಗೆ ರಾಜನಾಥ್ ಸಿಂಗ್ ಭೇಟಿ
ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರೊಂದಿಗೆ ಸಿಯಾಚಿನ್ ಹಿಮಪ್ರದೇಶಕ್ಕೆ ತೆರಳಿರುವ ಸಿಂಗ್, ಇಂಡೋ-ಪಾಕ್ ಗಡಿಯಲ್ಲಿ ಭದ್ರತಾ ವ್ಯವಸ್ಥೆ ಬಗ್ಗೆ ಪರಿಶೀಲನೆ ನಡೆಸಿದ್ದಾರೆ.
ಇದೇ ವೇಳೆ ಸಿಯಾಚಿನ್ ಪ್ರದೇಶದಲ್ಲಿ ಸೇವೆ ಸಲ್ಲಿಸುವಾಗ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಹುತಾತ್ಮ ಯೋಧರಿಗೆ ನಮನ ಸಲ್ಲಿಸಿದ್ದಾರೆ. ಸುಮಾರು 1100ಕ್ಕೂ ಹೆಚ್ಚು ಯೊಧರು ಸಿಯಾಚಿನ್ನಲ್ಲಿ ದೇಶಕ್ಕಾಗಿ ಪ್ರಾಣ ತ್ಯಾಗಮಾಡಿದ್ದಾರೆ.