ಕರ್ನಾಟಕ

karnataka

ETV Bharat / bharat

ಲಡಾಖ್​ ಪ್ರಾಂತ್ಯಕ್ಕೆ ಇಂದು ರಕ್ಷಣಾ ಸಚಿವರ ಭೇಟಿ - 370ನೇ ವಿಧಿ ರದ್ದು

ಸಂವಿಧಾನದ 370ನೇ ವಿಧಿ ರದ್ದತಿ ಬಳಿಕ ಕಣಿವೆ ರಾಜ್ಯಕ್ಕೆ ರಕ್ಷಣಾ ಸಚಿವರು ಇಂದು ಪ್ರಥಮ ಭೇಟಿ ನೀಡುತ್ತಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಭಾಗಿಯಾಗುವುದರ ಜೊತೆಗೆ ಅಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಲಿದ್ದಾರೆ.

ರಕ್ಷಣಾ ಸಚಿವ ರಾಜನಾಥ್ ಸಿಂಗ್

By

Published : Aug 29, 2019, 9:34 AM IST

ನವದೆಹಲಿ: ದೇಶದಲ್ಲಿ ನೂತನ ಕೇಂದ್ರಾಡಳಿತ ಪ್ರದೇಶವಾಗಿ ಅಸ್ತಿತ್ವಕ್ಕೆ ಬಂದಿರುವ ಲಡಾಖ್​ಗೆ ಇಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭೇಟಿ ನೀಡಲಿದ್ದಾರೆ.

ಸಂವಿಧಾನದ 370ನೇ ವಿಧಿ ರದ್ದತಿ ಬಳಿಕ ಕಣಿವೆ ರಾಜ್ಯಕ್ಕೆ ರಕ್ಷಣಾ ಸಚಿವರು ಇಂದು ಪ್ರಥಮ ಭೇಟಿ ನೀಡುತ್ತಿದ್ದು, ಕಾರ್ಯಕ್ರಮವೊಂದರಲ್ಲಿ ಭಾಗಿಯಾಗುವುದರ ಜೊತೆಗೆ ಪರಿಸ್ಥಿತಿಯನ್ನು ಅವಲೋಕಿಸಲಿದ್ದಾರೆ.

ಗುರುವಾರ ಲೇಹ್ ಹಾಗೂ ಲಡಾಖ್​​ಗೆ ಭೇಟಿ ನೀಡಲಿದ್ದು, 26ನೇ 'ಲಡಾಖಿ ಕಿಸಾನ್​ ಜವಾನ್ ವಿಜ್ಞಾನ್​ ಮೇಳ'ದ ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾಗಲಿದ್ದೇನೆ ಎಂದು ಬುಧವಾರ ರಾಜನಾಥ್ ಸಿಂಗ್ ಟ್ವೀಟ್ ಮಾಡಿದ್ದರು.

ಇದೇ ಭೇಟಿ ವೇಳೆ ಸೇನಾಧಿಕಾರಿಗಳ ಜೊತೆಗೆ ಭದ್ರತೆ ಹಾಗೂ ಗಡಿಯಲ್ಲಿನ ಸದ್ಯದ ಸ್ಥಿತಿ-ಗತಿಗಳ ಬಗ್ಗೆ ಮಾತುಕತೆ ನಡೆಸಲಿದ್ದಾರೆ.

ABOUT THE AUTHOR

...view details