ಬ್ಯಾಂಕಾಕ್(ಥಾಯ್ಲೆಂಡ್): ರಕ್ಷಣಾ ಸಚಿವ ರಾಜನಾಥ್ ಸಿಂಗ್, ಬ್ಯಾಂಕಾಕ್ನಲ್ಲಿ ಜಪಾನ್ ರಕ್ಷಣಾ ಮಂತ್ರಿ ಟ್ಯಾರೋ ಕೊನೊರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.
ಇದಕ್ಕೂ ಮೊದಲು ಅಮೆರಿಕಾದ ರಕ್ಷಣಾ ಕಾರ್ಯದರ್ಶಿ ಮಾರ್ಕ್ ಎಸ್ಪರ್ರನ್ನು ಭೇಟಿ ಮಾಡಿದ ಸಿಂಗ್ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ.

ಆಸಿಯಾನ್ ರಕ್ಷಣಾ ಸಚಿವರ ಸಭೆ(ADMM Plus) ಪ್ಲಸ್ನಲ್ಲಿ ಪಾಲ್ಗೊಳ್ಳಲು ರಾಜನಾಥ್ ಸಿಂಗ್ ಥಾಯ್ಲೆಂಡ್ಗೆ ತೆರಳಿದ್ದಾರೆ. ಜೊತೆಗೆ ಇಲ್ಲಿ ನಡೆಯಲಿರುವ ರಕ್ಷಣೆ ಮತ್ತು ಭದ್ರತೆಯ 2019ರ ಪ್ರದರ್ಶನದಲ್ಲೂ ಅವರು ಪಾಲ್ಗೊಳ್ಳಲಿದ್ದಾರೆ.
ಆಸಿಯಾನ್ ಡಿಫೆನ್ಸ್ ಮಿನಿಸ್ಟರ್ಸ್ ಮೀಟಿಂಗ್ ಪ್ಲಸ್ನಲ್ಲಿ ಪಾಲ್ಗೊಳ್ಳುತ್ತಿರುವ ಬಗ್ಗೆ ಮಾತನಾಡಿರುವ ರಾಜನಾಥ್ ಸಿಂಗ್, ಪರಸ್ಪರ ವಿವಿಧ ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರಕ್ಕೆ ಸಂಬಂಧಿಸಿದಂತೆ ನಂಬಿಕೆಯನ್ನು ಬೆಳೆಸಲು ಈ ವೇದಿಕೆ ಬಹಳ ಮಹತ್ವದ್ದಾಗಿದೆ. ಅಲ್ಲದೇ, ಭಾಗವಹಿಸುವ ಎಲ್ಲಾ ರಾಷ್ಟ್ರಗಳು ಸುಸ್ಥಿರ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಸಹಕಾರಿಯಾಗಬಹುದು ಎಂದು ಹೇಳಿದರು.