ನವದೆಹಲಿ: ಶ್ರೀಲಂಕಾದ ಕೊಲಂಬೊದಲ್ಲಿ ಭಾನುವಾರ ಬೆಳಗ್ಗೆ ಸಂಭವಿಸಿದ ಸರಣಿ ಬಾಂಬ್ ಸ್ಫೋಟದ ಹಿನ್ನಲ್ಲೆಯಲ್ಲಿ ದೇಶಾದ್ಯಂತ ಕಟ್ಟೆಚ್ಚರ ವಹಿಸಲಾಗಿದ್ದು, ಮತದಾನದ ನಡುವೆಯೂ ರಕ್ಷಣಾ ಸಚಿವರು ಸಭೆ ನಡೆಸಿದರು.
ಲಂಕಾ ದಹನ... ನೌಕಾ ಸೇನಾ ಮುಖ್ಯಸ್ಥರೊಂದಿಗೆ ರಕ್ಷಣಾ ಸಚಿವೆ ಸಭೆ - undefined
ಶ್ರೀಲಂಕಾದಲ್ಲಿ ಚರ್ಚ್ ಹಾಗೂ ಐಷರಾಮಿ ಹೋಟೆಲ್ ಸೇರಿದಂತೆ ಎಂಟು ಭಾಗದಲ್ಲಿ ಸರಣಿ ಬಾಂಬ ಸ್ಫೋಟ ಸಂಭವಿಸಿ 300ಕ್ಕೂ ಅಧಿಕ ಜನರು ಮೃತಪಟ್ಟರು. ಈ ಅತ್ಯುಗ್ರ ಕೃತ ಹಿನ್ನೆಲೆಯಲ್ಲಿ ದೇಶದ ಸಮುದ್ರ ವ್ಯಾಪ್ತಿಯಲ್ಲಿ ರಕ್ಷಣೆ ಕುರಿತು ಚರ್ಚಿಸಿದ್ದರು.
ದೆಹಲಿಯಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕರೆದ ಸಭೆಯಲ್ಲಿ ನೌಕಾ ಸೇನೆಯ ಅಡ್ಮಿರಲ್ ಸುನಿಲ್ ಲಂಬಾ, ವೈಸ್ ಚಿಫ್ ಅಡ್ಮಿರಲ್ ಕರಂಬಿರ್ ಸಿಂಗ್ ಹಾಗೂ ಕೋಸ್ಟ್ ಗಾರ್ಡ್ ಡೈರೆಕ್ಟರ್ ರಾಜೇಂದ್ರ ಸಿಂಗ್ ಭಾಗವಹಿಸಿದ್ದರು.
ಶ್ರೀಲಂಕಾದಲ್ಲಿ ಚರ್ಚ್ ಹಾಗೂ ಐಷರಾಮಿ ಹೋಟೆಲ್ ಸೇರಿದಂತೆ ಎಂಟು ಭಾಗದಲ್ಲಿ ಸರಣಿ ಬಾಂಬ್ ಸ್ಫೋಟ ಸಂಭವಿಸಿ 300ಕ್ಕೂ ಅಧಿಕ ಜನರು ಮೃತಪಟ್ಟರು. ಈ ಅತ್ಯುಗ್ರ ಕೃತ ಹಿನ್ನೆಲೆಯಲ್ಲಿ ದೇಶದ ಸಮುದ್ರ ವ್ಯಾಪ್ತಿಯಲ್ಲಿ ರಕ್ಷಣೆ ಕುರಿತು ಚರ್ಚಿಸಿದ್ದರು. ಗಡಿ ರಕ್ಷಣೆಯ ಬಗ್ಗೆ ತೆಗೆದುಕೊಳ್ಳಬೇಕಾದ ಕ್ರಮದ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ.