ಡೆಹ್ರಾಡೂನ್: ಹುತಾತ್ಮ ಯೋಧರ ಪೋಷಕರಿಗೆ ಗೌರವಿಸುವ ಶೌರ್ಯ ಸಮ್ಮಾನ್ ಸಮಾರೋಹ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಹುತಾತ್ಮ ವೀರ ಯೋಧನ ತಾಯಿಯರ ಪಾದ ಮುಟ್ಟಿ ನಮಸ್ಕಾರ ಮಾಡಿದ್ದಾರೆ.
ಹುತಾತ್ಮ ಯೋಧರ ತಾಯಂದಿರ ಪಾದ ಮುಟ್ಟಿ ನಮಸ್ಕರಿಸಿದ ರಕ್ಷಣಾ ಸಚಿವೆ ಸೀತಾರಾಮನ್! - ಶೌರ್ಯ ಸಮ್ಮಾನ್ ಸಮಾರೋಹ
ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಚಿವೆ ಸೀತಾರಾಮನ್, ಹುತಾತ್ಮ ಯೋಧರ ಪೋಷಕರು ಹಾಗೂ ಪತ್ನಿಯರನ್ನ ಗೌರವಿಸಿದ್ದಾರೆ. ಈ ವೇಳೆ ವೇದಿಕೆ ಮೇಲೆ ಬಂದ ಹುತಾತ್ಮ ಯೋಧನ ತಾಯಿಯೋರ್ವರಿಗೆ ಪುಷ್ಪಗುಚ್ಛ ನೀಡಿ, ಶಾಲು ಹೊಂದಿಸಿರುವ ಸಚಿವೆ ತದನಂತರ ಅವರ ಪಾದ ಮುಟ್ಟಿ ನಮಸ್ಕರಿಸಿದ್ದಾರೆ.
ಹುತಾತ್ಮ ಯೋಧರ ತಾಯಂದಿರ ಪಾದ ಮುಟ್ಟಿ ನಮಸ್ಕರಿಸಿದ ಸಚಿವೆ
ಉತ್ತರಾಖಂಡನ್ ಡೆಹ್ರಾಡೂನ್ನಲ್ಲಿರುವ ಹಾಥಿಬರ್ಕಲಾ ಏರಿಯಾದಲ್ಲಿ ನಡೆಯುತ್ತಿದ್ದ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದೆ. ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಚಿವೆ ಸೀತಾರಾಮನ್, ಹುತಾತ್ಮ ಯೋಧರ ಪೋಷಕರು ಹಾಗೂ ಪತ್ನಿಯರನ್ನ ಗೌರವಿಸಿದ್ದಾರೆ. ಈ ವೇಳೆ ವೇದಿಕೆ ಮೇಲೆ ಬಂದ ಹುತಾತ್ಮ ಯೋಧರ ತಾಯಿಯೋರ್ವರಿಗೆ ಪುಷ್ಪಗುಚ್ಛ ನೀಡಿ, ಶಾಲು ಹೊಂದಿಸಿರುವ ಸಚಿವೆ ತದನಂತರ ಅವರ ಪಾದ ಮುಟ್ಟಿ ನಮಸ್ಕರಿಸಿದ್ದಾರೆ.
ಇದೀಗ ಈ ವಿಡಿಯೋ ವೈರಲ್ ಆಗಿದ್ದು, ಸಚಿವೆಯ ವರ್ತನೆಗೆ ಎಲ್ಲಡೆ ಪ್ರಶಂಸೆ ವ್ಯಕ್ತವಾಗುತ್ತಿದೆ.