ನವದೆಹಲಿ: ರಷ್ಯಾದಿಂದ ಹೊಸದಾಗಿ 33 ಅತ್ಯಾಧುನಿಕ ಯುದ್ಧ ವಿಮಾನ ಖರೀದಿಗೆ ಕೇಂದ್ರ ರಕ್ಷಣಾ ಸಚಿವಾಲಯ ಅನುಮೋದನೆ ನೀಡಿದ್ದು, ಅದಕ್ಕಾಗಿ ಬರೋಬ್ಬರಿ 18,148 ಕೋಟಿ ರೂ ಖರ್ಚು ಮಾಡಲು ಮುಂದಾಗಿದೆ.
ರಷ್ಯಾದಿಂದ 33 ಹೊಸ ಯುದ್ಧ ವಿಮಾನ 12 ಸು-30ಎಂಕೆಐ, 21 ಮಿಗ್-29 ಹಾಗೂ 59 ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಮಿಗ್-29 ಯುದ್ಧ ವಿಮಾನ ಖರೀದಿ ಮಾಡಲು ನಿರ್ಧರಿಸಲಾಗಿದ್ದು, ಇಂದು ನಡೆದ ಮಹತ್ವದ ಸಭೆಯಲ್ಲಿ ಇದಕ್ಕೆ ಅನುಮೋದನೆ ಸಹ ನೀಡಲಾಗಿದೆ ಎಂದು ತಿಳಿದು ಬಂದಿದೆ.
ಇದರ ಜತೆಗೆ ಭಾರತೀಯ ವಾಯುಪಡೆ ಮತ್ತು ನೌಕಾಪಡೆಗೋಸ್ಕರ 248 ಅಸ್ಟ್ರಾ ಬಿಯಾಂಡ್ ವಿಷುಯಲ್ ರೇಂಜ್ ಏರ್ ಟೈಮ್ ಏರ್ ಕ್ಷಿಪಣಿ ಹಾಗೂ ಡಿಆರ್ಡಿಒದಿಂದ 1,000 ಕಿಲೋ ಮೀಟರ್ ಸ್ಟ್ರೇಕ್ ರೇಂಜ್ ಲ್ಯಾಂಡ್ ಅಟ್ಯಾಕ್ ಕ್ರೂಸ್ ಕ್ಷಿಪಣಿ ವಿನ್ಯಾಸ ಮತ್ತು ಅಭಿವೃದ್ದಿ ಪಡೆಸಲು ಕ್ರಮ ಕೈಗೊಳ್ಳಲಾಗಿದೆ.
ಇಂದಿನ ಸಭೆಯಲ್ಲಿ 38,900 ಕೋಟಿ ರೂ ವೆಚ್ಚದಲ್ಲಿ ಈ ಪ್ರಸ್ತಾವನೆ ಸಲ್ಲಿಕೆ ಮಾಡಲಾಗಿದ್ದು, ಇದಕ್ಕಾಗಿ 31,130 ಕೋಟಿ ರೂ. ಪಿನಾಕಾ ರಾಕೆಟ್ ಲಾಂಚರ್ಗಳಿಗೆ ಮದ್ದುಗುಂಡು, ಯುದ್ಧ ವಾಹನ ನವೀಕರಣ ಮತ್ತು ಸೇನೆಗಾಗಿ ಸಾಫ್ಟವೇರ್ ಡಿಫೈನ್ಡ್ ರೇಡಿಯೋ ಸೇರಿಕೊಂಡಿವೆ.ಇಂದಿನ ಸಭೆಯಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಅನೇಕ ಸೇನಾ ಮುಖ್ಯಸ್ಥರು ಭಾಗಿಯಾಗಿದ್ದರು.