ನವದೆಹಲಿ: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಶಾಶ್ವತವಲ್ಲದ ಸದಸ್ಯನಾಗಲು (Non-Permanent) ಭಾರತಕ್ಕೆ ಬೆಂಬಲ ನೀಡಿದ ಸಮಸ್ತ ವಿಶ್ವ ಸಮುದಾಯಕ್ಕೆ ತುಂಬು ಹೃದಯದ ಕೃತಜ್ಞತೆಗಳು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. ವಿಶ್ವದಲ್ಲಿ ಶಾಂತಿ, ಭದ್ರತೆ, ಸೌಹಾರ್ದತೆ ಹಾಗೂ ಸಮಾನತೆ ನೆಲೆಸುವಲ್ಲಿ ಇತರ ರಾಷ್ಟ್ರಗಳೊಂದಿಗೆ ಕೈಜೋಡಿಸಿ ಭಾರತ ಶ್ರಮಿಸಲಿದೆ ಎಂದು ಅವರು ನುಡಿದರು.
ಜಾಗತಿಕ ಸಮುದಾಯದ ಬೆಂಬಲಕ್ಕೆ ತುಂಬು ಹೃದಯದ ಕೃತಜ್ಞತೆ: ಪ್ರಧಾನಿ ಮೋದಿ
ಭಾರತಕ್ಕೆ ಬೆಂಬಲ ನೀಡಿದ ಸಮಸ್ತ ವಿಶ್ವ ಸಮುದಾಯಕ್ಕೆ ತುಂಬು ಹೃದಯದ ಕೃತಜ್ಞತೆಗಳು ಎಂದು ಪ್ರಧಾನ ಮಂತ್ರಿ ನರೇಂದ್ರ ಅವರು ಟ್ವೀಟ್ ಮಾಡಿದ್ದು, ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯ ಶಾಶ್ವತವಲ್ಲದ ಸದಸ್ಯ ಸ್ಥಾನ ಪಡೆಯಲು ಬೆಂಬಲ ನೀಡಿದ ರಾಷ್ಟ್ರಗಳಿಗೆ ಭಾರತದ ಧನ್ಯವಾದಗಳನ್ನು ತಿಳಿಸಿದ್ದಾರೆ.
India's membership of UNSC
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ನಡೆದ ಚುನಾವಣೆಯಲ್ಲಿ ಚಲಾವಣೆಗೊಂಡ ಒಟ್ಟು 192 ಮತಗಳ ಪೈಕಿ ಭಾರತ 184 ಮತಗಳನ್ನು ಪಡೆಯುವ ಮೂಲಕ ಪ್ರಬಲ ಭದ್ರತಾ ಮಂಡಳಿಯ ಕಾಯಂ ಅಲ್ಲದ ಸದಸ್ಯತ್ವ ಪಡೆದುಕೊಂಡಿತು.
ಬರುವ 2021 ರ ಜನೆವರಿ 1 ರಿಂದ ಆರಂಭವಾಗುವ ಭಾರತದ ಭದ್ರತಾ ಮಂಡಳಿ ಸದಸ್ಯತ್ವ ಅವಧಿ ಮುಂದಿನ ವರ್ಷಗಳವರೆಗೆ ಊರ್ಜಿತವಾಗಿರುತ್ತದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ 10 ರಾಷ್ಟ್ರಗಳು ಖಾಯಂ ಅಲ್ಲದ ಹಾಗೂ 5 ರಾಷ್ಟ್ರಗಳು ಕಾಯಂ ಸದಸ್ಯರಾಗಿರುತ್ತವೆ. ಭಾರತ ಭದ್ರತಾ ಮಂಡಳಿಯಲ್ಲಿ ಸ್ಥಾನ ಪಡೆಯುತ್ತಿರುವುದು ಇದು ಎಂಟನೇ ಬಾರಿಯಾಗಿದೆ.