ಕರ್ನಾಟಕ

karnataka

ETV Bharat / bharat

ಸುಶಾಂತ್ ಕೇಸ್: ವಿಚಾರಣೆಗೆ ಹಾಜರಾಗಲು ದೀಪಿಕಾ ಮ್ಯಾನೇಜರ್​ಗೆ ನೋಟಿಸ್ - ಕರೀಷ್ಮಾ ಪ್ರಕಾಶ್​ಗೆ ನೋಟಿಸ್ ನೀಡಿದ್ದ ಎನ್​ಸಿಬಿ

ಸುಶಾಂತ್ ಸಿಂಗ್ ರಜಪೂತ್ ಸಾವಿಗೆ ಡ್ರಗ್ ಲಿಂಕ್​ ಇರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್​ಸಿಬಿ ತನಿಖೆ ಚುರುಕುಗೊಳಿಸಿದೆ. ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಮ್ಯಾನೇಜರ್ ಕರೀಷ್ಮಾ ಪ್ರಕಾಶ್‌ಗೆ ವಿಚಾರಣೆಗೆ ಹಾಜರಾಗುವಂತೆ ಎನ್​ಸಿಬಿ ನೋಟಿಸ್‌ ನೀಡಿದೆ.

y NCB
ಎನ್​ಸಿಬಿ ನೋಟಿಸ್

By

Published : Oct 28, 2020, 12:25 PM IST

ಮುಂಬೈ: ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ನಂತರ ಬಾಲಿವುಡ್ ಸೆಲಬ್ರಿಟಿಗಳು ಹಾಗೂ ಡ್ರಗ್ ಪೆಡ್ಲರ್​​ಗಳ ನಡುವಿನ ಸಂಬಂಧದ ಬಗ್ಗೆ ಎನ್​ಸಿಬಿ ತನಿಖೆ ನಡೆಸುತ್ತಿದೆ. ಈ ಸಂಬಂಧ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಮ್ಯಾನೇಜರ್ ಕರೀಷ್ಮಾ ಪ್ರಕಾಶ್​ಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದೆ. ಕರೀಷ್ಮಾ ಇಂದು ವಿಚಾರಣೆಗೆ ಹಾಜರಾಗುವ ಸಾಧ್ಯತೆಯಿದೆ.

ನಿನ್ನೆಯಷ್ಟೇ ಕರೀಷ್ಮಾ ಪ್ರಕಾಶ್ ಅವರ ವರ್ಸೋವಾ ನಿವಾಸದ ಮೇಲೆ ಎನ್​ಸಿಬಿ ದಾಳಿ ನಡೆಸಿ 1.8 ಗ್ರಾಂ ಹಶೀಶ್ (ಮಾದಕವಸ್ತುವಿನ ಒಂದು ಬಗೆ) ಅನ್ನು ವಶಪಡಿಸಿಕೊಂಡಿತ್ತು. ಬಳಿಕ ಹೆಚ್ಚಿನ ತನಿಖೆಗಾಗಿ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿತ್ತು.

ಕಳೆದ ತಿಂಗಳು ಡ್ರಗ್​ ನಂಟಿರುವ ವಿಚಾರವಾಗಿ ದೀಪಿಕಾ ಪಡುಕೋಣೆ, ಸಾರಾ ಅಲಿ ಖಾನ್, ಶ್ರದ್ಧಾ ಕಪೂರ್ ಮತ್ತು ರಕುಲ್ ಪ್ರೀತ್​ ಸಿಂಗ್​ ಸೇರಿ ಹಲವರನ್ನು ಎನ್​ಸಿಬಿ ವಿಚಾರಣೆ ನಡೆಸಿತ್ತು.

ಸುಶಾಂತ್ ಸಿಂಗ್ ರಜಪೂತ್ ಸಾವಿಗೆ ಡ್ರಗ್ ಲಿಂಕ್​ ಇರುವ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಭಾಗವಾಗಿ ಎನ್​ಸಿಬಿ ಈವರೆಗೆ 23 ಜನರನ್ನು ಬಂಧಿಸಿದೆ.

ABOUT THE AUTHOR

...view details