ತಿರುಮಲ(ಆಂಧ್ರ ಪ್ರದೇಶ):ದೂರದ ಇಟಲಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಬಾಲಿವುಡ್ನ ಹಾಟ್ ಜೋಡಿ ದೀಪಿಕಾ ಪಡುಕೋಣೆ-ರಣವೀರ್ ಸಿಂಗ್ ಇದೀಗ ಮೊದಲ ವಿವಾಹ ವಾರ್ಷಿಕೋತ್ಸವ ಸಂಭ್ರಮದಲ್ಲಿದ್ದಾರೆ. ಸಪ್ತಪದಿ ತುಳಿದು ಇಂದಿಗೆ ಒಂದು ವರ್ಷ ತುಂಬಿರುವ ಕಾರಣ ವಿವಾಹ ವಾರ್ಷಿಕೋತ್ಸವವನ್ನು ವಿಶಿಷ್ಟವಾಗಿ ಆಚರಿಸಲು ಈ ದಂಪತಿ ಮುಂದಾಗಿದ್ದಾರೆ.
ಹಾಟ್ ಜೋಡಿಯ ಮೊದಲ ವಿವಾಹ ವಾರ್ಷಿಕೋತ್ಸವ... ತಿರುಪತಿಗೆ ಭೇಟಿ! - ದೀಪಿಕಾ ಪಡುಕೋಣೆ- ರಣವೀರ್ ಸಿಂಗ್
ಇಂದಿನಿಂದ ಮೂರು ದಿನಗಳ ಕಾಲ ಧಾರ್ಮಿಕ ಕ್ಷೇತ್ರಗಳಿಗೆ ಪ್ರವಾಸ ಕೈಗೊಂಡಿರುವ ಈ ದಂಪತಿ ಮೊದಲು ಆಂಧ್ರ ಪ್ರದೇಶದ ತಿರುಪತಿಗೆ ತೆರಳಿದ್ದಾರೆ. ದೇಶದ ಶ್ರೀಮಂತ ದೇವರಾಗಿರುವ ತಿಮ್ಮಪ್ಪನ ಆಶೀರ್ವಾದ ಪಡೆದು ಬಳಿಕ ಪದ್ಮಾವತಿ ದರ್ಶನ ಮಾಡಿದ್ದಾರೆ.
ತಿರುಪತಿ ದೇಗುಲಕ್ಕೆ ದೀಪ್ವೀರ್ ಭೇಟಿ
2018ರ ನ. 14 ರಂದು ಅದ್ಧೂರಿಯಾಗಿ ಮದುವೆಯಾದ ಈ ಜೋಡಿ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುವ ಮೂಲಕ ವಿಭಿನ್ನವಾಗಿ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿದೆ. ಇಂದು ಆಂಧ್ರ ಪ್ರದೇಶದ ತಿರುಮಲದ ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡುವ ಮೂಲಕ ತಮ್ಮ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದಾರೆ.
ಸಾಂಪ್ರದಾಯಿಕ ಉಡುಗೆ ತೊಟ್ಟ ಈ ಜೋಡಿ ಎಲ್ಲರ ಗಮನ ಸೆಳೆದಿದ್ದಾರೆ.
Last Updated : Nov 14, 2019, 12:48 PM IST