ಕಾರ್ಗೂನ್(ಮಧ್ಯಪ್ರದೇಶ):ಬಾಲಿವುಡ್ ಸ್ಟಾರ್ ನಟಿ ದೀಪಿಕಾ ಪಡುಕೊಣೆ ಫೋಟೋ ಬಳಕೆ ಮಾಡಿಕೊಂಡು ನರೇಗಾ ಜಾಬ್ ಕಾರ್ಡ್ ರಚನೆ ಮಾಡಲಾಗಿದ್ದು, ಇದೀಗ ಜಿಲ್ಲಾ ಪಂಚಾಯ್ತಿ ಸೆಕ್ರೆಟರಿ ಸೇರಿ ಅನೇಕರ ಅಮಾನತುಗೊಳಿಸಲಾಗಿದೆ.
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಮನ್ರೇಗಾ) ಯೋಜನೆಯಡಿ ಮಧ್ಯಪ್ರದೇಶದ ಪಿಪಾರ್ಖೆಡಾ ನಾಕಾ ಪಂಚಾಯ್ತಿಯಲ್ಲಿ ಬಾಲಿವುಡ್ ನಟಿ ಫೋಟೋ ಬಳಕೆ ಮಾಡಿ ನಕಲಿ ಜಾಬ್ ಕಾರ್ಡ್ ರಚನೆ ಮಾಡಿದ್ದರು. ಈ ಅಕ್ರಮ ಹೊರಬರುತ್ತಿದ್ದಂತೆ ಇದೀಗ ಪಂಚಾಯತ್ ಅಧ್ಯಕ್ಷ ,ಕಾರ್ಯದರ್ಶಿ ಮತ್ತು ಸೆಕ್ರೆಟರಿ ಅಮಾನತು ಮಾಡಲಾಗಿದೆ.